ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನ NSS ಘಟಕದ ವತಿಯಿಂದ ಪೂಜ್ಯ ಸ್ವಾಮಿ ವಿವೇಕಾನಂದರ ಜನ್ಮದಿನ ಹಾಗೂ ಅವರ ಗೌರವಾರ್ಥವಾಗಿ ಆಚರಿಸಲಾಗುವ "ರಾಷ್ಟ್ರೀಯ ಯುವ ದಿನ" ದ ಆಚರಣೆ ಕಾಲೇಜಿನಲ್ಲಿ ಜರುಗಿತು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಭೋಧಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಮತಿ ರಶ್ಮಿತಾ ಜೈನ್, ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಪ್ರದೀಪ್ ಕುಮಾರ್ ಶೆಟ್ಟಿ,ಉಪನ್ಯಾಸಕರುಗಳಾದಶ್ರೀ ತೇಜಸ್ವಿ ಭಟ್, ಡಾ. ವಾದಿರಾಜ್ ಕಲ್ಲುರಾಯ,ಶ್ರೀ ಪ್ರದೀಪ್ ಕುಮಾರ್, ಶ್ರೀ ಅಶೋಕ್, ಸಂಧ್ಯಾ ಉಪಸ್ಥಿತರಿದ್ದರು.