ಮೂಡುಬಿದಿರೆ: ಎಕ್ಸಲೆಂಟ್ ಕಾಲೇಜಿನಿಂದ 'ರಾಣಿ ಝರಿ' ಚಾರಣ: ಉತ್ತಮ ಹವ್ಯಾಸದತ್ತ ಯುವ ನಡಿಗೆ |
ಎಕ್ಸಲೆಂಟ್ ಕಾಲೇಜಿನ ವಿದ್ಯಾರ್ಥಿಗಳಿಗೆ ಒಂದು ದಿನದ ಚಾರಣವನ್ನು ಕಳಸ ಸಮೀಪದ 'ರಾಣಿಝರಿ' ಇಲ್ಲಿಗೆ ಎಕ್ಸಲೆಂಟ್ ಕಾಲೇಜಿನಲ್ಲಿ ಪ್ರಸ್ತುತ ಓದುತ್ತಿರುವ ವಿದ್ಯಾರ್ಥಿಗಳೊಂದಿಗೆ, ಸ್ಥಳೀಯ ಉಪನ್ಯಾಸಕರಾದ ಪ್ರದೀಪ್ ಇವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು.
'ಸಸ್ಯ ಶಾಮಲಾ' ಅಭಿಯಾನದ ಮೂಲಕ ಸಾವಿರಾರು ಗಿಡಗಳನ್ನು ನೆಟ್ಟು ಪೋಶಿಸುತ್ತಿರುವ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕಾಲೇಜಿನ ಕಾರ್ಯದರ್ಶಿಯವರಾದ ರಶ್ಮಿತಾ ಜೈನ್ ರವರು ಈ ಚಾರಣದಲ್ಲಿ ಭಾಗವಹಿಸಿ ' ಉತ್ತಮ ಹವ್ಯಾಸದತ್ತ ಯುವ ನಡಿಗೆ ' ಅಭಿಯಾನಕ್ಕೆ ಸಾಥ್ ನೀಡಿದರು.
ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪ್ರಶಾಂತ್, ಗಣಕವಿಭಾಗದ ಮುಖ್ಯಸ್ಥರಾದ ಪುರುಷೋತ್ತಮ್, ಉಪನ್ಯಾಸಕರಾದ ಅಶೋಕ್ ಮತ್ತು ಸಂದ್ಯಾ ಭಾಗವಹಿಸಿದ್ದರು.