'ಸ್ವಸ್ಥ ಸಮಾಜದೆಡೆಗೆ ನಮ್ಮ ನಡೆ' ಅಭಿಯಾನ - ಉದ್ಘಾಟನಾ ಕಾರ್ಯಕ್ರಮ

ಸ್ವಾಸ್ಥ್ಯ ಸಂಕಲ್ಪ ಅಭಿಯಾನದ ಅಂಗವಾಗಿ ಇಂದು ಎಕ್ಸಲೆಂಟ್ ಕಾಲೇಜಿನ ರಾಜ ಸಭಾಂಗಣದಲ್ಲಿ ಇಂದು 'ಸ್ವಸ್ಥ ಸಮಾಜದೆಡೆಗೆ ನಮ್ಮ ನಡೆ' ಅಭಿಯಾನದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಅಭಿಯಾನವನ್ನು ಕರ್ನಾಟಕ ಘನ ಸರಕಾರದ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್ ಅವರು ಉದ್ಘಾಟಿಸಿದರು,ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಶ್ರೀ ಯುವರಾಜ ಜೈನ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಸರಕಾರದ ಮಾಜಿ ಸಚಿವರಾದ ಶ್ರೀ ಕೆ. ಅಭಯಚಂದ್ರ ಜೈನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಮಿಥುನ್ ರೈ, ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಶ್ರೀಮತಿ ರಶ್ಮಿತಾ ಜೈನ್ ಸೇರಿದಂತೆ ಪ್ರಾಧ್ಯಾಪಾಕರುಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.