ವೇಣೂರು ಭಗವಾನ್ ಶ್ರೀ ಬಾಹುಬಲಿ ಮಹಾಮಸ್ತಕಾಭಿಷೇಕ - ಸ್ವಚ್ಛತಾ ಅಭಿಯಾನ

ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆ ಮೂಡುಬಿದಿರೆ ವತಿಯಿಂದ ಸ್ವಾಸ್ಥ್ಯ ಸಂಕಲ್ಪ ಮತ್ತು ಸ್ವಚ್ಛತಾ ಅಭಿಯಾನ ಯೋಜನೆಯಡಿ ಸ್ವಸ್ಥ ಸಮಾಜದೆಡೆ ನಮ್ಮ ನಡೆ ಎಂಬ ಹೆಸರಿನಲ್ಲಿ ವೇಣೂರು ಭಗವಾನ್ ಶ್ರೀ ಬಾಹುಬಲಿ ಮಹಾಮಸ್ತಕಾಭಿಷೇಕದ ಶುಭ ಸಂದರ್ಭದಲ್ಲಿ ತಿಮ್ಮಣ್ಣರಸರಾದಾ ಡಾ ಪದ್ಮಪ್ರಸಾದ್ ಅಜಿಲರು, ಅಳದಂಗಡಿ ಮನೆ ಮಾರ್ಗದರ್ಶನದಲ್ಲಿ, ವೇಣೂರು ಶ್ರೀ ಬಾಹುಬಲಿ ಮಸ್ತಕಾಭಿಷೇಕ ಸಮಿತಿ ಸಭೆ, ವೇಣೂರು ಪಂಚಾಯತ್, ವಿದ್ಯೋದಯ ವಿದ್ಯಾ ಸಂಸ್ಥೆಗಳು ವೇಣೂರು, ಸರಕಾರಿ ಪ್ರೌಢ ಶಾಲೆ, ವೇಣುರು, ಲಯನ್ಸ್ ಕ್ಲಬ್ ವೇಣೂರು, ಶ್ರೀ ಬಾಹುಬಲಿ ಯುವಜನ ಸಂಘ, ವೇಣೂರು ಇವರ ಸಹಯೋಗದೊಂದಿಗೆ ವೇಣೂರು ನಗರ ಸ್ವಚ್ಛತಾ ಕಾರ್ಯಕ್ರಮ ಬಾಹುಬಲಿ ಬೆಟ್ಟದ ಬಳಿಯಿಂದ ಆರಂಭಗೊಂಡಿತು.ಏಕ ಕಾಲದಲ್ಲಿ ಆರು ಕಡೆಗಳಿಂದ ಸ್ವಚ್ಛತಾ ಕಾರ್ಯಕ್ರಮ ಪ್ರಾರಂಭಗೊಂಡು ಕೆಳಗಿನ ಪೇಟೆ, ಬಂಟ್ವಾಳ ಕ್ರಾಸ್, ಸರಕಾರಿ ಶಾಲೆಯ ದ್ವಾರ, ಅರಣ್ಯ ಇಲಾಖೆ ಕಛೇರಿ ಬಳಿ, ಮಹಾಲಿಂಗೇಶ್ವರ ದೇವಸ್ಥಾನದ ದ್ವಾರದ ಬಳಿ ಸ್ವಚ್ಛತಾ ಅಭಿಯಾನವು ಜರುಗಿತು. ವೇಣೂರಿನ ಡಾ ಶಾಂತಿಪ್ರಸಾದ್, ನಮನ ಕ್ಲಿನಿಕ್ ಹಾಗೂ ವಿದ್ಯೋದಯ ಶಾಲೆಯ ಸಂಚಾಲಕರಾದ ಶಿವರಾಮ ಹೆಗ್ಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಶ್ರೀ ಯುವರಾಜ್ ಯುವರಾಜ ಜೈನ್ ವಹಿಸಿದ್ದರು. ಜೊತೆಗೆ, ಕಾರ್ಯಕ್ರಮದಲ್ಲಿ ಕರ್ನಾಟಕ ಸರಕಾರದ ಮಾಜಿ ಸಚಿವರಾದ ಅಭಯಚಂದ್ರ ಜೈನ್, ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಮತಿ ರಶ್ಮಿತಾ ಜೈನ್, ಲಯನ್ಸ್ ಕ್ಲಬ್ ವೇಣೂರಿನ ಶ್ರೀ ಸುಕುಮಾರ,ಬಾಹುಬಲಿ ಯುವಜನ ಸಂಘದ ಅಧ್ಯಕ್ಷರಾದ ಶ್ರೀ ಪ್ರಭಾಶ್ ಚಂದ್ರ, ಮಹಾಮಸ್ತಕಭಿಷೇಕ ಸಮಿತಿಯ ಸದಸ್ಯರಾದ ಮಹಾವೀರ, ನವೀನ್, ಗುಣಪಾಲ, ನವೀನ್ ಚಂದ್ರ, ಎಕ್ಸಲೆಂಟ್ ವಿದ್ಯಾ ಸಂಸ್ಥೆಯ ಆಡಳಿತ ನಿರ್ದೇಶಕರಾದ ಡಾ. ಬಿ. ಪಿ. ಸಂಪತ್ ಕುಮಾರ್, ಪ್ರಾಂಶುಪಾಲರಾದ ಶ್ರೀ ಪ್ರದೀಪ್ ಕುಮಾರ್ ಶೆಟ್ಟಿ, ಆಡಳಿತಾಧಿಕಾರಿಗಳಾದ ಶ್ರೀ ಹರೀಶ್ ಶೆಟ್ಟಿ, ಮುಖ್ಯೋಪಾಧ್ಯಾಯರಾದ ಶ್ರೀ ಶಿವಪ್ರಸಾದ ಭಟ್ ಮುಂತಾದವರು ಉಪಸ್ಥಿತರಿದ್ದರು. ಡಾ.ವಾದಿರಾಜ ಕಲ್ಲೂರಾಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Click here to View All