ಸ್ವಾಸ್ಥ್ಯ ಸಂಕಲ್ಪ ಮತ್ತು ಸ್ವಚ್ಛತಾ ಅಭಿಯಾನ

ಎಕ್ಸಲೆಂಟ್ ಮೂಡುಬಿದಿರೆ ಸ್ವಸ್ಥ ಸಮಾಜದೆಡೆ ನಮ್ಮ ನಡೆ ಸ್ವಾಸ್ಥ್ಯ ಸಂಕಲ್ಪ ಮತ್ತು ಸ್ವಚ್ಛತಾ ಅಭಿಯಾನದಡಿ ಪುರಸಭೆ ಮೂಡುಬಿದಿರೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮೂಡುಬಿದಿರೆ ಇದರ ಸಹಯೋಗದಲ್ಲಿ ವೇಣೂರು ಭಗವಾನ್ ಶ್ರೀ ಬಾಹುಬಲಿ ಮಹಾಮಸ್ತಕಾಭಿಷೇಕದ ಶುಭ ಸಂದರ್ಭದಲ್ಲಿ ಸ್ವಚ್ಛತಾ ಕಾರ್ಯಕ್ರಮ ಮೂಡುಬಿದಿರೆ ಮೆಸ್ಕಾಂ ಕಛೇರಿ ಬಳಿ ಉದ್ಘಾಟನೆಗೊಂಡಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ನ್ಯಾಯವಾದಿಗಳು, ನೋಟರಿಯು ಆಗಿರುವ ಬಾಹುಬಲಿ ಪ್ರಸಾದ್ ಅವರು ಸ್ವಚ್ಛ ಮನಸ್ಸು ಸ್ವಚ್ಛ ಪರಿಸರ ಸ್ವಚ್ಛ ಮನಸ್ಸಿನ ಪ್ರತೀಕವಾಗಿದೆ. ಸ್ವಚ್ಛವಾಗಿರುವುದು ಭಾರತೀಯ ಸಂಸ್ಕೃತಿ. ನಮ್ಮ ಪರಿಸರವನ್ನು ಸ್ವಚ್ಛವಾಗಿಡುವುದರಿಂದ ನಮ್ಮ ಸಂಸ್ಕೃತಿಯನ್ನು ಗೌರವಿಸೋಣ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಎಕ್ಸಲೆಂಟ್ ಮೂಡುಬಿದಿರೆ ಅಧ್ಯಕ್ಷರಾದ ಯುವರಾಜ ಜೈನ್ ಅವರು ವಹಿಸಿದ್ದರು,ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್, ಸಮಾರಂಭಗಳಲ್ಲಿ ಸಹಯೋಗ ನೀಡಿದ ಜೈನ್ ಮಿಲನ್ ಮೂಡುಬಿದಿರೆ ಅಧ್ಯಕ್ಷರಾದ ದಿನೇಶ್ ಆನಡ್ಕ, ರೋಟರಿ ಕ್ಲಬ್ ಟೆಂಪಲ್ ಟೌನ್ ಮೂಡುಬಿದಿರೆಯ ಅಧ್ಯಕ್ಷರಾದ ರೋನಿ ಫೆರ್ನಾಂಡಿಸ್, ಲಯನ್ಸ್ ಕ್ಲಬ್ ಮೂಡುಬಿದಿರೆ ಅಧ್ಯಕ್ಷರಾದ ಜೆಸ್ಸಿ ಮೆನೇಜಸ್, ಮೂಡುಬಿದಿರೆ ಪತ್ರಕರ್ತರ ಸಂಘದ ಅಧ್ಯಕ್ಷರಾದ ಯಶೋಧರ ಬಂಗೇರ,ಉಪಾಧ್ಯಕ್ಷರಾದ ಪ್ರೇಮ, ವಕೀಲರಾದ ಶೇತಾ ಜೈನ್, ಎಕ್ಸಲೆಂಟ್ ಸಂಸ್ಥೆಯ ಆಡಳಿತ ನಿರ್ದೇಶಕರಾದ ಬಿ ಪಿ ಸಂಪತ್ ಕುಮಾರ್, ಆಡಳಿತಾಧಿಕಾರಿ ಹರೀಶ್ ಶೆಟ್ಟಿ, ಉಪಸ್ಥಿತರಿದ್ದರು. ಮೂಡುಬಿದಿರೆ ಮೆಸ್ಕಾಂ ಬಳಿಯಿಂದ ಗಂಟಾಲ್ಕಟ್ಟೆ, ಹೊಸಂಗಡಿ, ಪೆರಿಂಜೆ, ಕರಿಮಣಿಯಲು, ವೇಣೂರು ಹೀಗೆ ಆರು ತಂಡಗಳಲ್ಲಿ ಸ್ವಚ್ಛತೆಯ ಜಾಗೃತಿ ಮೂಡಿಸುವುದರೊಂದಿಗೆ ಅಲ್ಲಲ್ಲಿ ಸೂಚನಾ ಫಲಕಗಳು ಅಳವಡಿಸುವುದು, ನಾಲ್ಕು ಬಸ್ಸು ನಿಲ್ದಾಣಗಳಲ್ಲಿ ವರ್ಲಿ ಪೈಂಟಿಂಗ್ ಮುಂತಾದ ಚಟುವಟಿಕೆಗಳ ಮೂಲಕ ಅಭಿಯಾನ ಸಂಪನ್ನಗೊಂಡಿತು. ಡಾ ವಾದಿರಾಜ ಕಲ್ಲೂರಾಯ, ತೇಜಸ್ವಿ ಭಟ್ ನಿರೂಪಿಸಿ ವಂದಿಸಿದರು.

Click here to View All