ನೂತನ ಸೌರ ವಿದ್ಯುತ್ ಘಟಕ ಉದ್ಘಾಟನೆ - ಡಾ | ತೇಜಸ್ವಿನಿ ಅನಂತಕುಮಾರ್

ಮೂಡುಬಿದಿರೆಯ ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ಕಾಲೇಜಿನಲ್ಲಿ ನೂತನವಾಗಿ ಸ್ಥಾಪಿಸಲ್ಪಟ್ಟ ಸೌರ ವಿದ್ಯುತ್ ಘಟಕವನ್ನು ಬೆಂಗಳೂರಿನ ಆದಮ್ಯ ಚೇತನ ಫೌಂಡೇಶನ್ ನ ಮುಖ್ಯಸ್ಥೆ ಡಾ | ತೇಜಸ್ವಿನಿ ಅನಂತಕುಮಾರ್ ಅವರು ಸ್ವಾತಂತ್ರ್ಯ ದಿನದಂದು ಉದ್ಘಾಟಿಸಿದರು. ಅವರು ಮಾತನಾಡಿ , ಇಂದಿನ ದಿನಗಳಲ್ಲಿ ವಿದ್ಯುತ್ ಉತ್ಪಾದನೆ ಮಾಡುವ ವಿಧಾನಗಳಲ್ಲಿ ಸೌರ ಶಕ್ತಿಯಿಂದ ವಿದ್ಯುತ್ತನ್ನು ಪಡೆಯುವ ವಿಧಾನದಲ್ಲಿ ಪರಿಸರಕ್ಕೆ ಮಾರಕವಾದ ಯಾವುದೇ ಅಂಶಗಳು ಇರುವುದಿಲ್ಲ , ವ್ಯರ್ಥವಾಗಿ ಹೋಗುವ ಈ ಅಪಾರ ಶಕ್ತಿಯನ್ನು ನಾವು ಬಳಸಿಕೊಳ್ಳುವುದು ನಾವು ಪರಿಸರಕ್ಕೆ ನೀಡುವ ಅತ್ಯಂತ ಸೂಕ್ತವಾದ ಕೊಡುಗೆ ಎಂದರು. ಬೆಂಗಳೂರಿನ ಓರ್ ಬಿ ಎನರ್ಜಿ ಸಂಸ್ಥೆಯವರು ನಿರ್ಮಿಸಿದ ಈ ಘಟಕದ ವ್ಯವಸ್ಥಾಪಕರಾದ ಶ್ರೀ ಬಾಲಕೃಷ್ಣ ಆಚಾರ್ಯ ಅವರು ಮಾತನಾಡಿ ಸುಮಾರು ಒಂದೂವರೆ ಕೋಟಿ ರೂಪಾಯಿ ವೆಚ್ಚದ ಈ ಘಟಕ ದಿನವೊಂದಕ್ಕೆ ಸರಾಸರಿ 1000 ಯುನಿಟ್ ವಿದ್ಯುತ್ತನ್ನು ಉತ್ಪಾದಿಸಿ ಮೆಸ್ಕಾಂ ಗೆ ಪೂರೈಸುತ್ತಿದೆ. 215 kV ಸಾಮರ್ಥ್ಯದ ಘಟಕದಲ್ಲಿ ಸುಮಾರು 15000 ಚದರ ಅಡಿ ವಿಸ್ತೀರ್ಣ ವುಳ್ಳ 600 ಸೌರ ಫಲಕಗಳನ್ನು ಅಳವಡಿಸಲಾಗಿದೆ. ಇದರಿಂದಾಗಿ ಸಂಸ್ಥೆಗೆ ಅಪಾರ ವಿದ್ಯುತ್ ವೆಚ್ಚ ಉಳಿತಾಯವಾಗುವುದು ಎಂದು ವಿವರಿಸಿದರು. ಸಂಸ್ಥೆಯ ಅಧ್ಯಕ್ಷರಾದ ಶ್ರೀ ಯುವರಾಜ್ ಜೈನ್ ಅವರು ಈ ಸಂದರ್ಭದಲ್ಲಿ ಮಾತನಾಡಿ ಈ ಹೊಸ ಯೋಜನೆ ಹಾಗು ಸಂಸ್ಥೆಯ ಇನ್ನಿತರ ಪರಿಸರ ಪೂರಕ ಯೋಜನೆಗಳಾದ ಶೂನ್ಯ ತ್ಯಾಜ್ಯ, ತ್ಯಾಜ್ಯ ನಿರ್ವಹಣಾ ಘಟಕ , ಸಾವಯವ ಗೊಬ್ಬರ ಉತ್ಪಾದನೆ, ಹೈನುಗಾರಿಕೆ, ಹಾಗು ಸಂಸ್ಥೆಯ ಕಾರ್ಯದರ್ಶಿಯವರ ವಿಶೇಷ ಮುತುವರ್ಜಿಯಲ್ಲಿ ಸಾವಿರ ಗಿಡ ನೆಡುವ ಸಸ್ಯ ಶ್ಯಾಮಲಾ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು . ಸಂಸ್ಥೆಯ ಕಾರ್ಯದರ್ಶಿಯವರಾದ ಶ್ರೀಮತಿ ರಶ್ಮಿತಾ ಜೈನ್ , ಪ್ರಾಂಶುಪಾಲರಾದ ಶ್ರೀ ಪ್ರದೀಪ್ ಶೆಟ್ಟಿ , ಆಡಳಿತಾಧಿಕಾರಿ ಶ್ರೀ ಹರೀಶ್ ಶೆಟ್ಟಿ , ಉಪನ್ಯಾಸಕರಾದ ಶ್ರೀ ತೇಜಸ್ವಿ ಭಟ್ , ಶ್ರೀ ಹರೀಶ್ ಮರವಂತೆ , ಉಪಸ್ಥಿತರಿದ್ದರು. ಪರುಷೋತ್ತಮ ತುಳುಪುಳೆ ಕಾರ್ಯಕ್ರಮ ನಿರ್ವಹಿಸಿದರು. YouTube Link: https://www.youtube.com/watch?v=iD2Pprp1ueM

Click here to View All