ಮೂಡುಬಿದಿರೆ ಪೊನ್ನೆಚಾರಿ ಶ್ರೀ ಲಕ್ಷ್ಮಿ ವೆಂಕಟರಮಣ ದೇವಾಲಯದ ಸಾರ್ವಜನಿಕ ಶ್ರೀ ಶಾರದಾ ಪೂಜಾ ಸಮಿತಿ ವತಿಯಿಂದ ಎಕ್ಸಲೆಂಟ್ ಸಂಸ್ಥೆಗಳ ಅಧ್ಯಕ್ಷರಾದ ಶ್ರೀ ಯುವರಾಜ್ ಜೈನ್ ಅವರಿಗೆ ಸಿರಿಪುರ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ ಆಲಂಗಾರು ಶ್ರೀ ವೇದಮೂರ್ತಿ ಈಶ್ವರ ಭಟ್ ಅವರಿಗೆ 'ಶಾರದಾನುಗ್ರಹ', ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಮಹಾವೀರ ಕಾಲೇಜಿನ ಪ್ರಾಚಾರ್ಯ ರಾದ ಶ್ರೀ ರಾಧಾಕೃಷ್ಣ ಶೆಟ್ಟಿ ವಹಿಸಿದರು. ಸಿರಿಪುರ ಸಾಂಸ್ಕೃತಿಕ ಪ್ರತಿಷ್ಠಾನ ದ ಗೌರವ ಅಧ್ಯಕ್ಷ ಶ್ರೀ ಶ್ರೀಪತಿ ಭಟ್, ದೇವಾಲಯದ ಆಡಳಿತ ಮೊಕ್ತೇಸರ ಶ್ರೀ ಅಶೋಕ್ ಕಾಮತ್ , ಸಿರಿಪುರ ಸಾಂಸ್ಕೃತಿಕ ಪ್ರತಿಷ್ಠಾನ ದ ಅಧ್ಯಕ್ಷ ಡಾ .ಶ್ರೀ ರಾಮಕೃಷ್ಣ ಶಿರೂರು ಉಪಸ್ಥಿತರಿದ್ದರು