ಎಕ್ಸಲೆಂಟ್ ನಲ್ಲಿ ವೈಭವದ ಶಾರದಾ ಪೂಜೆ - Oct 24 2023
ಅಧ್ಯಾತ್ಮಿಕದೆಡೆಗಿನ ಒಲವು ಮಕ್ಕಳಲ್ಲಿ
ಶೈಕ್ಷಣಿಕ ಅಭಿವೃದ್ಧಿಗೆ ಸಹಕಾರಿ - ಶ್ರೀ ವಿಶ್ವನಾಥ
ತಂತ್ರಿ ಅಂಡಾರು.
ನಿತ್ಯ ಜೀವನದ ತೊಳಲಾಟಗಳ ಮಧ್ಯೆ ಕ್ಷಣ
ಹೊತ್ತು ಭಗವತನೆಡೆ ಮನಸ್ಸನ್ನು
ಕೇಂದ್ರಿಕರಿಸಬೇಕಾದದ್ದು ಪ್ರತಿಯೋರ್ವ
ವ್ಯಕ್ತಿಯ ಕರ್ತವ್ಯವಾಗಿದೆ.
ಪಂಚೇಂದ್ರಿಯಗಳಲ್ಲಿ ಯಾವುದಾದರೊಂದು
ಇಂದ್ರೀಯದ ಕಾರ್ಯಕ್ಕೆ ಜಡ ಆವರಿಸದರೂ
ಬದುಕು ಸಾಧ್ಯ. ಆದರೆ ಇಡೀ ಜಗತ್ತು
ಚಲನಶೀಲವಾಗಿರುವುದು ಭಗವಂತನ
ಇರುವಿಕೆಯಿಂದ ಎಂದು ಶ್ರೀ ಅಂಡಾರು ವಿಶ್ವನಾಥ
ತಂತ್ರಿಗಳು ಅಭಿಪ್ರಾಯಪಟ್ಟರು. ಎಕ್ಸಲೆಂಟ್
ಮೂಡುಬಿದಿರೆಯಲ್ಲಿ ಜರಗಿದ ಶಾರದಾ ಪೂಜಾ
ಮಹೋತ್ಸವ ಕಾರ್ಯಕ್ರಮದಲ್ಲಿ ಮಕ್ಕಳಿಗೆ
ಧಾರ್ಮಿಕ ಉಪನ್ಯಾಸವನ್ನು ನೀಡುತ್ತಾ ಮಾತನಾಡಿದ
ಅವರು ಆಧ್ಯಾತ್ಮಿಕದೆಡೆಗಿನ ಸೆಳೆತ ಮಕ್ಕಳಲ್ಲಿ
ಶೈಕ್ಷಣಿಕ ಅಭಿವೃದ್ಧಿ ಏಕಾಗ್ರತೆಗೆ ಸಹಕಾರಿ. ಈ
ನಿಟ್ಟಿನಲ್ಲಿ ಎಕ್ಸಲೆಂಟ್ ಶಿಕ್ಷಣ ಸಂಸ್ಥೆ ವಿಶೇಷ
ಕಾಳಜಿಯನ್ನು ವಹಿಸಿ ಧರ್ಮ ಹಾಗೂ
ಸಂಸ್ಕಾರಗಳಿಗೆ ಸಂಬಂಧಿಸಿದಂತೆ ಹತ್ತು ಹಲವು
ಕಾರ್ಯಕ್ರಮಗಳ ಮೂಲಕ ಮಕ್ಕಳಲ್ಲಿ
ಒಲವನ್ನು ಮೂಡಿಸುತ್ತಿದೆ. ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು
ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಶ್ರೀ
ಯುವರಾಜ್ ಜೈನ್ ಇವರು ಮಾತನಾಡುತ್ತಾ
ಮಕ್ಕಳಲ್ಲಿ ಸಾಂಸ್ಕ್ರತಿಕ, ಧಾರ್ಮಿಕ
ಪ್ರಜ್ಞೆಯನ್ನು ಮೂಡಿಸುವುದರ ಮೂಲಕ
ಸನಾತನ ಭಾರತೀಯ ಸಂಸ್ಕ್ರತಿಯನ್ನು
ವಿಶ್ವದೆಲ್ಲೆಡೆ ಪಸರಿಸುವಂತೆ ಮಾಡಬೇಕಾದುದು
ಪ್ರಸಕ್ತ ಕಾಲ ಘಟ್ಟದಲ್ಲಿರುವ
ಅನಿವಾರ್ಯತೆಯಾಗಿದ್ದು, ಈ ನಿಟ್ಟಿನಲ್ಲಿ ಎಕ್ಸಲೆಂಟ್
ಸಂಸ್ಥೆಯಲ್ಲಿ ಜರಗುವ ಭಜನಾ ಕಾರ್ಯಕ್ರಮ,
ಧಾರ್ಮಿಕ ಕ್ಷೇತ್ರಗಳಿಗೆ
ಪಾದಯಾತ್ರೆಯಂತಹ ಕಾರ್ಯಕ್ರಮಗಳು
ಮಕ್ಕಳಲ್ಲಿ ಉತ್ತಮ ಸಂಸ್ಕಾರಗಳನ್ನು
ಮೂಡಿಸುತ್ತಿದೆ ಎಂದು ತಿಳಿಸಿದರು. ಇದೇ
ಸಂದರ್ಭದಲ್ಲಿ ವೈದಿಕ ಕ್ಷೇತ್ರಗಳಲ್ಲಿ
ಸೇವೆಯನ್ನು ಸಲ್ಲಿಸುತ್ತಿರುವ ಶ್ರೀ ನಾಗೇಂದ್ರ
ಕುಮಾರ್ ಇಂದ,್ರ ಶ್ರೀ ವಿಶ್ವನಾಥ ತಂತ್ರಿ ಅಂಡಾರು,
ಮತ್ತು ಸಮಾಜ ಸೇವಕಿ ಗೌರ ಗೋವರ್ಧನ್ ಕೆ
ಇವರುಗಳನ್ನು ಸಂಸ್ಥೆಯ ವತಿಯಿಂದ
ಸನ್ಮಾನಿಸಲಾಯಿತು.
ಸಭಾ ಕಾರ್ಯಕ್ರಮದ ನಂತರ ವಿಧಿ
ವಿಧಾನಗಳೊಂದಿಗೆ ಜರಗಿದ ಶಾರದಾ ಪೂಜೆ
ಹಾಗೂ ಭಜನಾ ಕಾರ್ಯಕ್ರಮದಲ್ಲಿ 2500 ಮಂದಿ
ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಜರಗಿದ
ಭಜನಾ ಸ್ಪರ್ಧೆ, ಸಾಂಪ್ರಾದಾಯಿಕ
ಮೆರವಣಿಗೆಯಲ್ಲಿ ಶಾರದಾ ದೇವಿಯ ಆಗಮನ,
ಸಂಸ್ಥೆಯ ವಿದ್ಯಾರ್ಥಿಗಳಿಂದ ಜರಗಿದ ಸಾಂಸ್ಕ್ರತಿಕ
ಕಾರ್ಯಕ್ರಮಗಳು ಶಾರದಾ ಪೂಜಾ
ಮಹೋತ್ಸವದ ವೈಭವಕ್ಕೆ ಸಾಕ್ಷಿಯಾದವು.
ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ರಶ್ಮಿತಾ
ಜೈನ್ ಸ್ವಾಗತಿಸಿದರು. ಸಹ ಮುಖ್ಯೋಪಾಧ್ಯಾಯ
ಶ್ರೀ ಜಯಶೀಲ್ ನಿರೂಪಣೆ ಗೈದರು.
ಕಾರ್ಯಕ್ರಮದಲ್ಲಿ ಆಡಳಿತ ನಿರ್ದೇಶಕ ಶ್ರೀ
ಸಂಪತ್ ಕುಮಾರ್ ಜೈನ್, ಮುಖ್ಯೋಪಾಧ್ಯಾಯ
ಶಿವಪ್ರಸಾದ ಭಟ್ ಉಪಸ್ಥಿತರಿದ್ದರು.
YouTube Link : https://www.youtube.com/watch?v=-ts8KfVI-R4