75th Republic Day Celebration

ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮವು ಜರುಗಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಖ್ಯಾತ ಲೆಕ್ಕ ಪರಿಶೋಧಕರಾದ ಸಿಎ ಉಮೇಶ್ ರಾವ್ ಅವರು ಧ್ವಜಾರೋಹಣಗೈದು ಮಾತನಾಡಿದರು ಗಣರಾಜ್ಯೋತ್ಸವ ಕೇವಲ ಆಚರಣೆಗೆ ಸೀಮಿತಗೊಳಿಸದೆ ನಮ್ಮ ಹಿರಿಯರು ಮಾಡಿದ ತ್ಯಾಗ,ಬಲಿದಾನಗಳನ್ನುನೆನಪಿಟ್ಟುಕೊಳ್ಳಬೇಕು. ವಿದ್ಯಾರ್ಥಿಗಳಾದ ನೀವು ನಾಲ್ಕು ಅಂಶಗಳನ್ನು ನೆನಪಿಟ್ಟುಕೊಳ್ಳಬೇಕು.ಮೊದಲನೆಯದಾಗಿ ಹೊಸ ವಿಚಾರಗಳ ಬಗ್ಗೆ ಮಾಹಿತಿ ನಿಮ್ಮಲ್ಲಿ ಇರಲಿ. ಇದರಿಂದ ಬದಲಾದ ಕಾಲಕ್ಕೆ ತಕ್ಕಂತೆ ಹೊಂದಿಕೊಂಡು ಯಶಸ್ವಿ ಜೀವನವನ್ನು ನಡೆಸಬಹುದು. ಎರಡನೆಯದಾಗಿ ಸಹಿಷ್ಣುಗಳಾಗಿರಿ. ಇದರ ತಾತ್ಪರ್ಯ ಅನ್ಯಾಯದ ವಿರುದ್ಧ ಹೋರಾಡಬಾರದೆಂದಲ್ಲ. ನಮ್ಮ ಭಾರತೀಯ ಸಂಸ್ಕೃತಿ ಜಗತ್ತನ್ನೇ ಒಂದು ಕುಟುಂಬವೆಂದು ಭಾವಿಸುವ ವಸುಧೈವಕುಟುಂಬಕಂ ತತ್ವವನ್ನು ಒಳಗೊಂಡಿದೆ. ಆ ತತ್ವವನ್ನು ಅಳವಡಿಸಿಕೊಳ್ಳಿ. ಮೂರನೆಯದಾಗಿ ನಾಗರೀಕ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಿ. ಇದು ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದಾಗಿರಬಹುದು, ಅಥವಾ ಸಾಮಾಜಿಕ ಅನ್ಯಾಯದ ವಿರುದ್ಧ ದನಿ ಎತ್ತುವುದಾಗಿರಬಹುದು. ಮತ್ತು ಕೊನೆಯದಾಗಿ ಮತದಾನ ಮಾಡುವ ವಯಸ್ಸು ಬಂದಾಗ ಮತದಾನಾದ ಹಕ್ಕನ್ನು ಸದುಪಯೋಗಿಸಿಕೊಳ್ಳಿ ಎಂದು ಮೂಡುಬಿದಿರೆಯ ಖ್ಯಾತ ಲೆಕ್ಕ ಪರಿಶೋಧಕ ಉಮೇಶ ರಾವ್ ಮಿಜಾರ ಅವರು ಹೇಳಿದರು. ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಸಂವಿಧಾನ ನಮ್ಮ ಹಿರಿಯರು ನಮಗೆ ನೀಡಿದ ಕೊಡುಗೆಯಾಗಿದ್ದು ಅದನ್ನು ನಾವು ಜಾಗರೂಕತೆಯಿಂದ ಕಾಪಾಡಿಕೊಂಡು ಬರಬೇಕೆಂದು ಅವರು ವಿದ್ಯಾರ್ಥಿಗಳಿಗೆ ಹೇಳಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಯುವರಾಜ ಜೈನ್ ಅವರು ವಹಿಸಿದ್ದರು. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ ಹಾಗೂ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಶಿವಪ್ರಸಾದ ಭಟ್ ಹಾಗೂ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ವಿಕ್ರಮ್ ನಾಯಕ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Click here to View All