ಎಕ್ಸಲೆಂಟ್ ನಲ್ಲಿ ರಾಣಿ ಅಬ್ಬಕ್ಕ ಸಂಸ್ಮರಣ ಅಂಚೆ ಚೀಟಿ ಲೋಕಾರ್ಪಣೆ

ಮೂಡುಬಿದಿರೆ: ತನ್ನ ಪತಿಯೇ ವೈರಿಯೆನ್ನುವ ಅರಿವಿದ್ದರೂ ಸತಿಯ ಧರ್ಮ ತಪ್ಪದೇ ಧೈರ್ಯದಿಂದ ಹೋರಾಡಿದ ವೀರ ರಾಣಿ ಅಬ್ಬಕ್ಕ. ಶಿಕ್ಷಣಕ್ಕೆ ಹೆಸರಾದ ಜಿಲ್ಲೆಯ ಜನತೆ ಅಬ್ಬಕ್ಕಳ ಸ್ಫೂತರ್ಿ ಸಂಸ್ಮರಣೆಗಾಗಿ ಕರಾವಳಿಯಲ್ಲಿ ಸೈನಿಕ ಶಾಲೆಯೊಂದನ್ನು ತೆರೆಯುವ ಸಂಕಲ್ಪಕ್ಕೆ ಮುಂದಾಗಬೇಕು ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕರೆ ನೀಡಿದರು.ಅವರು ಶುಕ್ರವಾರ ಅಪರಾಹ್ನ ಕಲ್ಲಬೆಟ್ಟು ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ರಾಜ ಸಭಾಂಗಣದಲ್ಲಿ ಭಾರತ ಸರಕಾರದ ಸಂವಹನ ಸಚಿವಾಲಯ, ಅಂಚೆ ಇಲಾಖೆ, ಎಕ್ಸಲೆಂಟ್ ಶಿಕ್ಷಣ ಪ್ರತಿಷ್ಠಾನ, ರಾಣಿ ಅಬ್ಬಕ್ಕ ದೇವಿ ಸಂಸ್ಮರಣ ಅಂಚೆ ಚೀಟಿ ಅನಾವರಣ ಸಮಿತಿಯ ಜಂಟಿ ಆಶ್ರಯದಲ್ಲಿ ನಡೆದ ಸಮಾರಂಭದಲ್ಲಿ ಮೂಡುಬಿದಿರೆಯ ತುಳುನಾಡಿನ ಅಭಯರಾಣಿ ಅಬ್ಬಕ್ಕ ದೇವಿಯ ಸಂಸ್ಮರಣಾರ್ಥ ಅಂಚೆ ಚೀಟಿಯನ್ನು ಅನಾವರಣಗೊಳಿಸಿ ಮಾತನಾಡಿದರು. ಎಕ್ಸಲೆಂಟ್ ಸಂಸ್ಥೆಯ ಮಾಸಿಕ ಪತ್ರಿಕೆ ಮನೋರಮಾದ ರಾಣಿ ಅಬ್ಬಕ್ಕ ದೇವಿಯ ಕುರಿತಾದ ವಿಶೇಷ ಸಂಚಿಕೆಯನ್ನೂ ಅವರು ಈ ಸಂದರ್ಭದಲ್ಲಿ ಅನಾವರಣಗೊಳಿಸಿದರು. ರಾಷ್ಟ್ರೀಯ ಏಕತೆಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದು ಪ್ರಧಾನಿ ಅವರ ಆಶಯದಂತೆ ಇಂದು ಭಾರತೀಯ ಮಹಿಳೆ ರಫೇಲ್, ತೇಜಸ್, ಸೇನೆ, ಯುದ್ಧ ನೌಕೆಯಲ್ಲೂ ಮುಂಚೂಣಿಯಲ್ಲಿದ್ದಾಳೆ. ಮಹಿಳಾ ಮಸೂದೆ ಆಕೆಗೆ ಇನ್ನಷ್ಟು ಶಕ್ತಿ ತುಂಬಲಿದೆ. ಧರ್ಮದ ಪಾಲನೆಯ ಜತೆ ರಕ್ಷಣೆಗೂ ಮಹಿಳೆ ಅಬ್ಬಕ್ಕನೇ ಮೊದಲಾದ ಮಹಿಳಾ ಸಾಧಕಿಯರಿಂದ ಸ್ಫೂತರ್ಿ ಪಡೆಯುವಂತಾಗಬೇಕು.ಸ್ಥಳೀಯ ಐತಿಹಾಸಿಕ, ಪುರಾತತ್ವ ಶೋಧನೆಯಿಂದ ಇನ್ನಷ್ಟು ಪ್ರಾದೇಶಿಕ ಐತಿಹಾಸಿಕ ಶ್ರೀಮಂತಿಕೆ ಹೊರಬರುವಂತಾಗಬೇಕು. ನಾನಂತೂ ಕರಾವಳಿಯ ಈ ನೆಲದಿಂದ ರೋಮಾಚಂನಗೊಂಡಿದ್ದು ಸ್ಫೂತರ್ಿ, ಪ್ರೇರಣೆ ತುಂಬಿಕೊಂಡಿರುವುದಾಗಿ ಅವರು ತಿಳಿಸಿದರು. ಎಲ್ಲ ಮಹಿಳೆಯರಂತೆ ಅಬ್ಬಕ್ಕನೂ ಕೌಟುಂಬಿಕ ಮತ್ತು ಸಾಮಾಜಿಕ ಹೀಗೆ ಎರಡು ಮುಖಗಳ ಕರ್ತವ್ಯವನ್ನೂ ಪಾಲಿಸಿ ಮೆರೆದವರು. ಅಂಚೆ ಚೀಟಿಯ ಅನಾವರಣ ಆಕೆಯ ಸಾರ್ಥಕ ಸಂಸ್ಮರಣೆಗೆ ಸಾಕ್ಷಿಯಾಗಿದೆ. ಮಹಿಳಾ ಮೀಸಲಾತಿ ಮಸೂದೆಯಿಂದ ಮಹಿಳೆಯರನ್ನೂ ರಾಷ್ಟ್ರದ ಮುಖ್ಯವಾಹಿನಿಗೆ ಸೇರಲು ನೀಡಲಾಗಿರುವ ಅವಕಾಶದಿಂದ ಮಹಿಳೆಯರ ಅವಕಾಶ ಮತ್ತು ಭವಿಷ್ಯ ಇನ್ನಷ್ಟು ಉಜ್ವಲವಾಗಲಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧಮರ್ಾಧಿಕಾರಿ ರಾಜಷರ್ಿ ಡಾ.ಡಿ. ವೀರೇಂದ್ರ ಹೆಗ್ಗಡೆ ನುಡಿದರು. ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಅಬ್ಬಕ್ಕನಿಗೆ ಪೂರಕವಾಗಿ ಹೊನ್ನಾವರದಲ್ಲಿ ರಾಣಿ ಚೆನ್ನಬೈರಾದೇವಿ ನಡೆಸಿದ ಹೋರಾಟದ ನೆನಪನ್ನು ಶಾಶ್ವತವಾಗಿಡಲು ಅರಣ್ಯ ಇಲಾಖೆ ಅಲ್ಲಿ ಎರಡು ಎಕರೆ ಸ್ಥಳ ನೀಡಿದರೆ ಸ್ಮಾರಕ ನಿಮರ್ಿಸುವುದಾಗಿ ಅವರು ಹೇಳಿದರು. ಭಾರತೀಯ ಅಂಚೆ ಇಲಾಖೆಯ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಎಸ್. ರಾಜೇಂದ್ರ ಕುಮಾರ್ ಮಾತನಾಡಿ ಅಬ್ಬಕ್ಕನ ಅಂಚೆ ಚೀಟಿ ಬಿಡುಗಡೆ ತುಳು ನಾಡಿಗೆ ಇದೊಂದು ಚಾರಿತ್ರಿಕ ದಿನವಾಗಲಿದೆ ಎಂದರು. ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್, ಶಾಸಕ ಉಮಾನಾಥ ಕೋಟ್ಯಾನ್, ಶ್ರೀಕ್ಷೇತ್ರ ಧರ್ಮಸ್ಥಳದ ಡಿ.ಸುರೇಂದ್ರ ಕುಮಾರ್ ಅನಿತಾ ಸುರೇಂದ್ರ ಕುಮಾರ್ , ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ.ತುಕಾರಾಮ ಪೂಜಾರಿ, ಉಪಸ್ಥಿತರಿದ್ದರು. ಸಂಸ್ಥೆಯ ಕಾರ್ಯದಶರ್ಿ ರಶ್ಮಿತಾ ಜೈನ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಅಂಚೆ ಚೀಟಿ ಸಮಿತಿಯ ಸಂಚಾಲಕ ಡಾ.ಬಿ.ಪಿ.ಸಂಪತ್ ಕುಮಾರ್ ವಂದಿಸಿದರು. ವಿಶ್ರಾಂತ ಪ್ರಾಧ್ಯಾಪಕಿ ಡಾ. ಮಾಲಿನಿ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು.