ಎನ್ ಎಸ್ ಎಸ್ ವಾರ್ಷಿಕ ಶಿಬಿರ - ಸಮಾರೋಪ ಸಮಾರಂಭ 23 Oct 2023
ತಾಳ್ಮೆ ಶಿಸ್ತಿನ ಜೀವನದಲ್ಲಿ ಯಶಸ್ಸಿದೆ- ಶ್ರೀಮತಿ ರಶ್ಮಿತಾ ಜೈನ್
ಮೂಡುಬಿದಿರೆ:- ತಾಳ್ಮೆ ಹಾಗೂ ಶಿಸ್ತಿನ ಜೀವನ ಮನುಷ್ಯನ
ಜೀವನದಲ್ಲಿ ಅನಿವಾರ್ಯ ಹಾಗು ಅಗತ್ಯ. ಅದು ಯಶಸ್ಸಿನತ್ತ
ನಮ್ಮನ್ನು ಕೊಂಡೊಯ್ಯುತ್ತದೆ. ಸ್ವಚ್ಛ ಮನಸ್ಸು , ಸ್ವಚ್ಛ
ಪರಿಸರ ವ್ಯಕ್ತಿಯ ಹಾಗೂ ದೇಶದ ಪ್ರಗತಿಗೆ ಅನಿವಾರ್ಯ. ಆ
ನಿಟ್ಟಿನಲ್ಲಿ ನಮ್ಮೆಲ್ಲರ ಪ್ರಯತ್ನ ಮುಂದುವರಿಯಬೇಕು
ಎಂದು ಎಕ್ಸಲೆಂಟ್ ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ರಶ್ಮಿತಾ ಜೈನ್
ಅವರು ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ
ಯೋಜನೆ ಘಟಕದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ
ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಸಮಾರೋಪ ಭಾಷಣ ಮಾಡಿದ ಸಂಸ್ಥೆಯ ಅಧ್ಯಕ್ಷರಾದ
ಯುವರಾಜ್ ಜೈನ್, ಒಗ್ಗಟ್ಟು, ಒಮ್ಮತದ ಮಹಾನಡೆಗಳು
ನಮ್ಮ ಜೀವನಡೆಗಳನ್ನು ನಾಯಕತ್ವದೆಡೆಗೆ ಒಯ್ಯುತ್ತದೆ
ಎಂದು ಹೇಳಿದರು.
ಬದ್ಧತೆ, ಶ್ರದ್ಧೆ, ಸಮಾಜಪ್ರೀತಿ, ರಾಷ್ಟ್ರೀಯ ಸೇವಾ ಯೋಜನೆಯ
ಮೂಲಕ ಪ್ರತಿಯೋರ್ವನು ಗಳಿಸಬಹುದಾದ ಸದಂಶಗಳು.
ಸಿಕ್ಕ ಅವಕಾಶಗಳನ್ನು ಧನಾತ್ಮಕವಾಗಿ ಬಳಸಿಕೊಂಡು ನಮ್ಮ
ಸೃಜನಶೀಲತೆಯ ಮೂಲಕ, ಸುಪ್ತ ಪ್ರತಿಭೆಯ ಮೂಲಕ
ಬೆಳೆಸುವುದೇ ಈ ಶಿಬಿರದಿಂದ ನೀವು ಪಡೆದ ಲಾಭಗಳು ಎಂದು
ನಿತ್ಯಸಹಾಯ ಮಾತೆ ದೇವಾಲಯ, ಗಂಟಾಲಕಟ್ಟೆ ಇಲ್ಲಿಯ
ಪ್ರಧಾನ ಧರ್ಮಗುರುಗಳಾದ ವಂ. ರೊನಾಲ್ಡ್ ಡಿ.ಸೋಜಾ
ಹೇಳಿದರು.
ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ
ಪ್ರದೀಪ್‍ಕುಮಾರ್ ಶೆಟ್ಟಿ, ಉಪಪ್ರಾಂಶುಪಾಲರಾದ ಶ್ರೀ
ಮನೋಜ್‍ಕುಮಾರ್, ಎಂ.ಕೆ.ಶೆಟ್ಟಿ ಸೆಂಟ್ರಲ್ ಸ್ಕೂಲ್
ಉಪಪ್ರಾಂಶುಪಾಲರಾದ ಶ್ರೀಮತಿ ವಿಮಲಾ ಶೆಟ್ಟಿ, ಕರಿಂಜೆ ನಾಗಬ್ರಹ್ಮ
ರಕ್ತೇಶ್ವರಿ ಸೇವಾಟ್ರಸ್ಟ್ ಕಾರ್ಯದರ್ಶಿ ಶ್ರೀ ಶಶಿಧರ್ ಶೆಟ್ಟಿ,
ಎಕ್ಸಲೆಂಟ್ ಸಂಸ್ಥೆಯ ಆಡÀಳಿತ ನಿರ್ದೇಶಕರಾದ ಡಾ. ಬಿ.ಪಿ.
ಸಂಪತ್ ಕುಮಾರ್ ಉಪಸ್ಥಿತರಿದ್ದರು.
ಶಿಬಿರಾರ್ಥಿಗಳಾದ ಅಪೇಕ್ಷಾ, ಅಶ್ವಿನ್, ಚಂದ್ರಶೇಖರ್, ವಿಮರ್ಶಾ ಜೈನ್,
ಸಿಂಚನಾ, ಅಭಿಪ್ರಾಯ ತಿಳಿಸಿದರು.
ನಾಯಕತ್ವ ಗುಣಗಳಿಗೆ ಕೊಡುವ ವಿಶೇಷ
ಬಹುಮಾನಗಳನ್ನು ಕೊಡುವ ಕಾರ್ಯಕ್ರಮವನ್ನು ವಾಣಿಜ್ಯ
ವಿಭಾಗದ ಶ್ರೀ ಪ್ರದೀಪ ಕೆ.ಪಿ, ಅವರು ನಡೆಸಿಕೊಟ್ಟರು. ವಾಣಿಜ್ಯ
ವಿಭಾಗ ಮುಖ್ಯಸ್ಥರಾದ ಪ್ರಶಾಂತ್ ಶೆಟ್ಟಿ ಸ್ವಾಗತಿಸಿ, ಉಪನ್ಯಾಸಕಿ
ಶ್ರೀಮತಿ ಸಂಧ್ಯಾಕುಮಾರಿ ಕಾರ್ಯಕ್ರಮ ನಿರೂಪಿಸಿದರು.
ಶಿಬಿರಾಧಿಕಾರಿ ತೇಜಸ್ವೀ ಭಟ್ ವಂದಿಸಿದರು.