ವಿಧಾನ ಪರಿಷತ್ ಸದಸ್ಯ ಶ್ರೀ ಎಸ್ ಎಲ್ ಭೋಜೇಗೌಡ ಅವರಿಂದ ದಶಮಾನೋತ್ಸವ ಸಂಚಿಕೆ 'ಮೌಲ್ಯ' ಬಿಡುಗಡೆ

ವಿಧಾನ ಪರಿಷತ್ ಸದಸ್ಯ ಶ್ರೀ ಎಸ್ ಎಲ್ ಭೋಜೇಗೌಡ ಅವರಿಂದ ದಶಮಾನೋತ್ಸವ ಸಂಚಿಕೆ 'ಮೌಲ್ಯ' ಬಿಡುಗಡೆ. ಕಾಲೇಜಿನಲ್ಲಿ ನಡೆದ ಸರಳ ಸಮಾರಂಭದಲ್ಲಿ ಶ್ರೀಯುತರು ಸಂಸ್ಥೆಯ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡುತ್ತ ಮೌಲ್ಯಾಧಾರಿತ ಶಿಕ್ಷಣವೇ ನಮ್ಮ ಬದುಕಿನ ಅಂತಃ ಸತ್ವ, ವಿದ್ಯಾರ್ಥಿಗಳು ಕೇವಲ ಅಂಕಗಳ ಬೆನ್ನು ಹಿಡಿಯದೆ, ತನ್ನ ಹಾಗೂ ಸಮಾಜದ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಶಿಕ್ಷಣದೊಂದಿಗೆ ಬದುಕನ್ನು ಕಟ್ಟುವಂತಾಗಬೇಕು, ಈ ನಿಟ್ಟಿನಲ್ಲಿ ಶಿಕ್ಷಕರಾದ ನಾವೆಲ್ಲರೂ ಜವಾಬ್ದಾರಿಯಿಂದ ಮಕ್ಕಳನ್ನು ಬೆಳೆಸಬೇಕು ಎಂದು ಕರೆಯಿತ್ತರು. ಸಮಾಜಮುಖಿಯಾಗಿ ಅತ್ಯಲ್ಪ ಸಮಯದಲ್ಲೇ ಅತ್ಯಂತ ಪರಿಪೂರ್ಣವಾಗಿ ಸಂಸ್ಥೆಯನ್ನು ಬೆಳೆಸಿದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಯವರ ಸಂಕಲ್ಪ ಶಕ್ತಿಯನ್ನು ಮತ್ತು ಕಾರ್ಯಕ್ಷಮತೆಯನ್ನು, ಸಿಬ್ಬಂದಿಗಳೆಲ್ಲರ ಶ್ರಮವನ್ನು ಗುರುತಿಸಿ ಮುಂದೆಯೂ ಸಂಸ್ಥೆ ಅಭಿವೃದ್ಧಿ ಹೊಂದುತ್ತಿರಲಿ ಎಂದು ಆಶಿಸಿದರು. ಮುಂದಿನ ಯೋಜಿತ ಕಾರ್ಯಕ್ರಮಗಳಿಗೆ ಹಣಕಾಸು ನೆರವನ್ನು ನೀಡುವುದಾಗಿ ಅವರು ಈ ಸಂದರ್ಭದಲ್ಲಿ ಘೋಷಿಸಿದರು. ಸಂಸ್ಥೆಯ ನಿರ್ದೇಶಕರಾದ ಡಾ ಸಂಪತ್ ಕುಮಾರ್, ಕಾರ್ಯದರ್ಶಿಯವರಾದ ಶ್ರೀಮತಿ ರಶ್ಮಿತಾ ಜೈನ್, ಪ್ರಾಂಶುಪಾಲರಾದ ಪ್ರದೀಪ್ ಶೆಟ್ಟಿ, ಮುಖ್ಯೋಪಾಧ್ಯಾಯರಾದ ಶಿವಪ್ರಸಾದ್ ಭಟ್ , ಆಡಳಿತಾಧಿಕಾರಿ ಹರೀಶ್ ಶೆಟ್ಟಿ ಹಾಗೂ ಎಲ್ಲ ಸಿಬ್ಬಂದಿಗಳು ಉಪಸ್ಥಿತರಿದ್ದರು. ಡಾ ವಾದಿರಾಜ ಕಲ್ಲೂರಾಯ ಕಾರ್ಯಕ್ರಮ ನಿರ್ವಹಿಸಿದರು.

Click here to View All