ಸ್ವಾಮಿ ವಿವೇಕಾನಂದ ಮಾನವೋತ್ಥಾನ ವೇದಿಕೆ ಯ ಉದ್ಘಾಟನೆ 21 June 2023

ಮೂಡುಬಿದಿರೆ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ಸ್ವಾಮಿ ವಿವೇಕಾನಂದ ಮಾನವೋತ್ಥಾನ ವೇದಿಕೆ ಯ ಉದ್ಘಾಟನಾ ಸಮಾರಂಭ ಜರುಗಿತು. ರಾಮಕೃಷ್ಣ ವಿವಕಾನಂದ ಆಶ್ರಮ ತುಮಕೂರು ಇದರ ಅಧ್ಯಕ್ಷರಾದ ಶ್ರೀ ವಿರೇಶಾನಂದ ಸರಸ್ವತಿ ಸ್ವಾಮೀಜಿಯವರು ವೇದಿಕೆಯನ್ನು ಉದ್ಘಾ ಟಿಸಿ ಯೋಗ ಯೋಗ್ಯತೆ ಒಗ್ಗೂಡಿದಾಗ ಪ್ರಗತಿ ಕಾಣುತ್ತದೆ. ಶಿಕ್ಷಣ ಬದುಕು ವ್ಯಕ್ತಿತ್ವ ರೂಪಿಸಬೇಕು. ಯೋಗ ಅಭ್ಯುದಯಕ್ಕೆ ಪೂರಕ. ಕಾಯಾ ವಾಚಾ ಮನಸ್ಸಿನ ಶ್ರೇಯಸ್ಸು ನೀಡುತ್ತದೆ ಎಂದರು. ವಿಶ್ರಾಂತ ಪ್ರಾಧ್ಯಾಪಕ, ವಾಸ್ತು ತಜ್ಞ ರಾಮಚಂದ್ರ ಆಚಾರ್ ಧ್ಯಾನ ಮಂದಿರ ದಲ್ಲಿ ಓಂಕಾರ ದ್ವಾರ ಅನಾವರಣಗೊಳಿಸಿದರು. ಅವರ ಹೆಸರಿನ ರಾಮಚಂದ್ರ ವಸತಿ ಗೃಹದ ಉದ್ಘಾಟನೆ ನಡೆಯಿತು. ಎಕ್ಸಲೆಂಟ್ ಅಧ್ಯಕ್ಷರಾದ ಯುವರಾಜ್ ಜೈನ್ ಸಭಾಧ್ಯಕ್ಷತೆ ವಹಿಸಿದ್ದರು. ವಾಸ್ತು ತಜ್ಞ ರಾದ ರಾಮಚಂದ್ರ ಆಚಾರ್ ಹಾಗು ವಿದ್ಯಾರ್ಥಿನಿ ಯೋಗ ಸಾಧಕಿ ಐಶಾನಿ ಜಿ ರೈ ಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಮಾಜಿ ಸಚಿವ ಅಭಯಚಂದ್ರ ಜೈನ್, ಚೌಟರ ಅರಮನೆ ಕುಲದೀಪ್ ಎಂ., ಉದ್ಯಮಿ ಶ್ರೀಪತಿ ಭಟ್, ಕರಿಂಜೆಗುತ್ತು ಕೃಷ್ಣರಾಜ ಹೆಗ್ದೆ ಅತಿಥಿಗಳಾಗಿದ್ದರು. ಎಕ್ಸಲೆಂಟ್ ಕಾರ್ಯದರ್ಶಿ ರಶ್ಮಿತ ಜೈನ್ ಸ್ವಾಗತಿಸಿದರು. ಮುಖ್ಯೋಪಾಧ್ಯಾಯ ಶಿವಪ್ರಸಾದ್ ಭಟ್ ಧನ್ಯವಾದವಿತ್ತರು. ಅಕಾಡೆಮಿಕ್ ಅಡ್ವೈಸರ್ ಸಂಪತ್ ಕುಮಾರ್ ಉಪಸ್ಥಿತರಿದ್ದರು. ಸಭಾ ಕಾರ್ಯ ಕ್ರಮದ ಮುಂಚಿತವಾಗಿ ವಿಧ್ಯಾರ್ಥಿಗಳಿಂದ ಯೋಗ ನೃತ್ಯ ಜರುಗಿತು.

Click here to View All