ಸಾಂಸ್ಕ್ರತಿಕ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ - ಮಾನಸಿ ಸುಧೀರ್

ಕಲೆ ಕೌಶಲ್ಯವನ್ನು ಮೀರಿದ್ದು- ಕಾಂತಾರ ನಟಿ ಮಾನಸಿ ಸುಧೀರ್ ಅಭಿಮತ, ಮೂಡುಬಿದಿರೆ:- ಜಗತ್ತಿನ ಮೊದಲ ನಟ ಶಿವ, ಜಗತ್ತನ್ನು ಕಾಪಾಡಲು ವಿಷವನ್ನೇ ಕುಡಿದ ಶಿವನೇ ಎಲ್ಲಾ ಕಲಾವಿದರ ಆರಧ್ಯ ದೈವ, ಸತತ ಪ್ರಯತ್ನದಿಂದ ಕೌಶಲ್ಯ ಬರುತ್ತದೆ. ಕಲೆ ಕೌಶಲ್ಯವನ್ನು ಮೀರಿದ್ದು ಎನ್ನುತ್ತಾ ಎಕ್ಸಲೆಂಟ್ ವಿದ್ಯಾಸಂಸ್ಥೆ ಧನಾತ್ಮಕ ಚಿಂತನೆ ಹೊಂದಿದೆ. ಈ ಚಿಂತನೆಯಡಿಯಲ್ಲಿ ಎಕ್ಸಲೆಂಟ್ ಪ್ರತಿಭಾವಂತ ಗುರುಗಳನ್ನು ಹೊಂದಿದೆ. ಅವರ ಮಾರ್ಗದರ್ಶನದಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸುತ್ತಾ ತಂತ್ರಜ್ಞಾನಕ್ಕೂ ಮೀರಿದ ಸೃಜನಶೀಲತೆಯನ್ನು ಬೆಳೆಸಿಕೊಳ್ಳಬೇಕು. ಕಲಾ ಆರಧಕರಾಗಿ ಕಲೆಯನ್ನು ಪ್ರೀತಿಸಿದಾಗ ಮಾನಸಿಕ ನೆಮ್ಮದಿಯ ಜೊತೆಗೆ ಸಾಧಕರಾಗಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಈ ಎಕ್ಸಲೆಂಟ್ ವಿದ್ಯಾಸಂಸ್ಥೆ ಅತ್ಯತ್ತಮ ಪ್ರೋತ್ಸಹ ನೀಡುತ್ತದೆ. ಆ ಪ್ರೋತ್ಸಹವನ್ನು ಉತ್ತಮವಾಗಿ ಬಳಸಿಕೊಂಡು ಕಲಾ ಜಗತ್ತಿಗೆ ಚಂದದಿಂದ ಆಗಮಿಸಿ ಎಂದು ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ನಡೆದ ಸಾಂಸ್ಕ್ರತಿಕ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಖ್ಯಾತಿ ಪಡೆದ ಕಾಂತಾರದ ಕಮಲಕ್ಕ ಖ್ಯಾತಿಯ ಮಾನಸಿ ಸುಧೀರ್ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು. ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಜೈನ್ ಮಾತನಾಡಿ ಕಲಾ ಚಟುವಟಿಕೆಗಳನ್ನು ಪ್ರೀತಿಯಿಂದ ಆಶ್ವಾದಿಸಿ ವಿದ್ಯಾರ್ಥಿಗಳನ್ನು ಕಲೆಯಲ್ಲಿ ಮಾಸ್ಟರ್ಸ್ ಮಾಡುವುದು ನಮ್ಮ ಕನಸಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಮಾತನಾಡಿ ಕಲೆ ಮನುಷ್ಯನನ್ನು ಸಂತೋಷವಾಗಿಡಿಸುತ್ತದೆ. ಪ್ರತಿದಿನ ತಮ್ಮ ಕಲೆಯ ಮೂಲಕ ಸಂತೋಷವನ್ನು ಉಣಬಡಿಸುತ್ತಿರುವ ನಟಿ ಮಾನಸಿ ಸುಧೀರ್ ಇವರಿಗೆ “ಅಭಿನಯ ಶಂಕರಿ” ಎಂಬ ಬಿರುದು ನೀಡಿ ಗೌರವಿಸುವುದು ನಮಗೆ ಹೆಮ್ಮೆಯೆನಿಸುತ್ತದೆ. ನಮ್ಮ ವಿದ್ಯಾರ್ಥಿಗಳು ಪ್ರಪಂಚದ ಮೂಲೆ ಮೂಲೆಗಳಲ್ಲಿ ಸಾಧನೆ ಮಾಡಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ಎನ್ನುತ್ತಾ ವಿದ್ಯಾರ್ಥಿಗಳಿಗೆ ನಮ್ಮ ದೌರ್ಬಲ್ಯವನ್ನು ಶಕ್ತಿಯನ್ನಾಗಿ ಬದಲಿಸಿಕೊಳ್ಳಬೇಕು. ಯಶಸ್ವಿನತ್ತ ಹೆಜ್ಜೆ ಇಡಬೇಕು ಎಂದರು. ಕಾರ್ಯಕ್ರಮದಲ್ಲಿ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಆಡಳಿತ ನಿರ್ದೇಶಕರಾದ ಡಾ. ಸಂಪತ್ ಕುಮಾರ್ ಪ್ರಾಂಶುಪಾಲರಾದ ಪ್ರದೀಪ್ ಕುಮಾರ್ ಮುಖ್ಯೋಪಾಧ್ಯಾಯ ಶಿವಪ್ರಸಾದ್ ಭಟ್ ಸಹ ಮುಖ್ಯೋಪಾಧ್ಯಾಯ ಜಯಶೀಲ ಸೆಂಟ್ರಲ್ ಶಾಲೆಯ ಉಪ ಪ್ರಾಂಶುಪಾಲೆ ವಿಮಲಾ ಹಾಗೂ ಎಲ್ಲಾ ಚಟುವಟಿಕೆಯ ಶಿಕ್ಷಕರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ನಟಿ ಮಾನಸಿ ಸುಧೀರ್ ಅವರನ್ನುಗೌರವಿಸಿ ಸನ್ಮಾನಿಸಲಾಯಿತು. ಉಪನ್ಯಾಸಕ ಡಾ. ವಾದಿರಾe ಕಲ್ಲೂರಾಯ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿನಿ ಮೌಲ್ಯ ಸ್ವಾಗತಿಸಿದರು. ಶ್ಯಾಮಿಲಿ ಹೆಗ್ಡೆ ವಂದಿಸಿದರು. ವಿದ್ಯಾರ್ಥಿ ಸಂಜಿತ್ ನಿರೂಪಿಸಿದರು.

Click here to View All