ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಸ್ಥಳೀಯ ಪೋಷಕ ಶಿಕ್ಷಕರ ಸಭೆ

*ಅಂಕಗಳಿಗಿಂತ ಜ್ಞಾನ ಮುಖ್ಯ:- ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಅಭಿಮತ ಮೂಡುಬಿದಿರೆ: ಇವತ್ತಿನ ಮಕ್ಕಳಿಗೆ ತುಂಬಾ ಅವಕಾಶಗಳಿದ್ದಾವೆ. ಅಂತಹ ಅವಕಾಶಗಳನ್ನು ಹೇಗೆ ಬಳಸಿಕೊಳ್ಳಬೇಕು. ಎಂಬುದನ್ನು ಪೋಷಕರು, ಶಿಕ್ಷಕರು ಕಲಿಸಬೇಕಾಗಿದೆ. ಬೆಳೆಯುತ್ತಿರುವ ಈ ಸಾಮಾಜಿಕ ವ್ಯವಸ್ಥೆಯಲ್ಲಿ ಮಕ್ಕಳಿಗೆ ಗುರುಗಳ ಕುರಿತು ಭಕ್ತಿ ಗೌರವವನ್ನು ಬೆಳೆಸಬೇಕಾಗಿದೆ. ಈ ನಿಟ್ಟಿನಲ್ಲಿ ಸಂಸ್ಕಾರಯುತವಾದ ಶಿಕ್ಷಣ ಕೊಡುವುದು ನಮ್ಮ ಉದ್ದೇಶವಾಗಿದೆ. ಇಲ್ಲಿ ಶಿಸ್ತು ತುಂಬಾ ಅವಶ್ಯಕವಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಬೇಕಾದ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡುವುದು ನೀಡುವುದು ನಮ್ಮ ಕರ್ತವ್ಯ. ಹೆತ್ತವರು ಮಕ್ಕಳ ಕಲಿಕೆಗೆ ಸದಾ ಪ್ರೇರಕ ಶಕ್ತಿಗಳಾಗಿ ನಿಲ್ಲಬೇಕು. ಆ ಮೂಲಕ ಮಕ್ಕಳಲ್ಲಿ ಜ್ಞಾನ ವರ್ತನೆ, ಕೌಶಲ್ಯಗಳ ಬೆಳವಣಿಗೆಗೆ ಸಹಕಾರಿಯಾಗಬೇಕು. ಈ ಕಾಲದಲ್ಲಿ ಮಕ್ಕಳಿಗೆ ಅಂಕಗಳಿಂತ ಜ್ಞಾನ ಮುಖ್ಯ ಅದರಲ್ಲೂ ಸಂಸ್ಕಾರಯುತವಾದ ಜ್ಞಾನ ಮುಖ್ಯ. ಅಂತಹ ಜ್ಞಾನ ನೀಡುವಲ್ಲಿ ಶಿಕ್ಷಕರು ಸದಾ ಜೊತೆಗಿರುತ್ತಾರೆ. ಎಂದು ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ನಡೆದ ಸ್ಥಳೀಯ ಪೋಷಕ ಶಿಕ್ಷಕರ ಸಭೆಯಲ್ಲಿ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಹೇಳಿದರು. ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಮಾತನಾಡಿ ಸ್ಥಳೀಯ ಮಕ್ಕಳು ಒಳ್ಳೆಯ ಸಾಧನೆ ಮಾಡುತ್ತಿದ್ದಾರೆ. ಅವರ ಯಶಸ್ಸಿನ ಹಿಂದೆ ಪೋಷಕರ ಪ್ರೋತ್ಸಾಹ ತುಂಬಾ ಮುಖ್ಯ ಎಂದರು. ಎಕ್ಸಲೆಂಟ್ ಸಂಸ್ಥೆಯ ಶಾಲಾ ವಿಭಾಗದ ಐಐಟಿ/ನೀಟ್ ಸಂಯೋಜಕ ಪ್ರಶಾಂತ್ ಮಾತಾನಾಡಿ ವಿದ್ಯಾರ್ಥಿಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಹಲವಾರು ರೀತಿಯ ಒತ್ತಡಗಳು ಬರಬಹುದು ಆದರೆ ಕಲಿಕೆಯಲ್ಲಿ ಒತ್ತಡ ಇದ್ದರೆ ಗುರಿ ಸಾಧನೆ ಸುಲಭವಾಗುತ್ತದೆ ಎಂದು ಹೇಳಿದರು. ಸಂಸ್ಥೆಯ ಶೈಕ್ಷಣಿಕ ಸಲಹೆಗಾರ ಪುಷ್ಪರಾಜ್ ಮಾತನಾಡುತ್ತ ಪೋಷಕರ ಕನಸನ್ನು ನನಸಾಗಿಸುವ ಸಲುವಾಗಿ ಮಕ್ಕಳನ್ನು ಓದಿಸುವುದಲ್ಲಿ ಅವರ ಕನಸನ್ನು ಸಾಕಾರಗೊಳಿಸಿಕೊಳ್ಳುವತ್ತ ಮೌಲ್ಯಯುತ ಶಿಕ್ಷಣ ದೊರಕುವಂತೆ ಮಾಡುವುದು ಪೋಷಕರ ಕರ್ತವ್ಯವಾಗಬೇಕು, ಮಕ್ಕಳು ಕಲಿಯುವುದು ನಮ್ಮ ಮಾತುಗಳಿಂದಲ್ಲ, ನಮ್ಮ ನಡವಳಿಕೆಯಿಂದ ಎಂದು ಪೋಷಕರಿಗೆ ಹೇಳಿದರು. ಮುಖ್ಯೋಪಾಧ್ಯಾಯ ಶಿವಪ್ರಸಾದ್ ಭಟ್ ಸ್ವಾಗತಿಸಿದರು. ಉಪ ಮುಖ್ಯೋಪಾಧ್ಯಾಯ ಜಯಶೀಲ ವಂದಿಸಿದರು. ಶಿಕ್ಷಕಿ ಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು.

Click here to View All