ಎಕ್ಸಲೆಂಟ್ ಮೂಡುಬಿದಿರೆ ಪ್ರಸ್ತುತಪಡಿಸುವ ಕೌಮುದೀ ಸರಣಿ ಉಪನ್ಯಾಸ ಕಾರ್ಯಕ್ರಮದ ಅಂಗವಾಗಿ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ವಿದ್ಯಾರ್ಥಿಗಳ ಚಿಂತನೆ ಹೇಗಿರಬೇಕು? ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ ಜರುಗಿತು. ಸಂಪನ್ಮೂಲ ವ್ಯಕ್ತಿಗಳಾಗಿ ಸಂಸ್ಥೆಯ ಆಡಳಿತ ನಿರ್ದೇಶಕರಾದ ಡಾ. ಬಿ. ಪಿ. ಸಂಪತ್ ಕುಮಾರ್ ಅವರು ಆಗಮಿಸಿ ಸಕಾರಾತ್ಮಕ ಚಿಂತನೆಯ ಸತ್ಪರಿಣಾಮಗಳ ಕುರಿತು ಸ್ಫೂರ್ತಿಯುತ ಉಪನ್ಯಾಸ ನೀಡಿದರು.