KCET 2024 Results - 2nd and 8th Rank

Excellent students have scored 2nd and 8th Ranks in KCET 2024. Management has congratulated the achievers ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವಿವಿಧ ವೃತ್ತಿಪರ ಕೋರ್ಸುಗಳ ಪ್ರವೇಶಾತಿಗಾಗಿ ನಡೆಸಿದ ಸಿಇಟಿ ಫಲಿತಾಂಶ ಪ್ರಕಟಗೊಂಡಿದ್ದು ಮೂಡುಬಿದಿರೆಯ ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅಭೂತಪೂರ್ವ ಸಾಧನೆಯನ್ನು ಮಾಡಿದ್ದಾರೆ. ನಿಖಿಲ್ ಬಿ ಗೌಡ ವೆಟರ್ನರಿ ಮತ್ತು ನರ್ಸಿಂಗ್‌ನಲ್ಲಿ ರಾಜ್ಯಕ್ಕೆ 8 ನೇ ರ‍್ಯಾಂಕ್, ಬಿಫಾರ್ಮಾ ಮತ್ತು ಡಿಫಾರ್ಮಾಗಳಲ್ಲಿ 10 ನೇ ರ‍್ಯಾಂಕ್, ಬಿಎನ್‌ವೈಎಸ್‌ನಲ್ಲಿ 31ನೇ ರ‍್ಯಾಂಕ್, ಅಗ್ರಿಕಲ್ಚರಲ್‌ನಲ್ಲಿ 108 ನೇ ರ‍್ಯಾಂಕ್ ಪಡೆದಿರುತ್ತಾನೆ. ಶ್ರೀಶೈಲ ಅಗ್ರಿಕಲ್ಚರಲ್(ಪಿ) ಮತ್ತು ವೆಟರ್ನರಿ(ಪಿ)2ನೇ ರ‍್ಯಾಂಕ್, ನಿಶಾಂತ್ ಪಿ ಹೆಗಡೆ ವೆಟರ್ನರಿ 54ನೇ ರ‍್ಯಾಂಕ್, ನರ್ಸಿಂಗ್ 54, ಅಗ್ರಿಕಲ್ಚರಲ್ 59, ಬಿಎನ್‌ವೈಎಸ್ 61, ಬಿಫಾರ್ಮಾ ಮತ್ತು ಡಿಫಾರ್ಮಾ 89ನೇ ರ‍್ಯಾಂಕ್ ಪಡೆದಿರುತ್ತಾರೆ. ಅದೇ ರೀತಿ ಭಾರ್ಗವಿ ಎಂ ಜೆ, ಸೃಜನ್ ಎಂ ಆರ್, ಶಿಶಿರ ಬಿ ಇ, ರೋಹನ್ ಎಸ್, ಶಶಾಂಕ್ ಎಂ, ಸುಹಾಸ್ ಎಂ ಎಸ್, ಸಮರ್ಥ ಸಮ್ಯಮ್, ಸಂಜಯ್ ಬಿರಾದಾರ್ ಅತ್ಯುತ್ತಮ ಅಂಕಗಳೊಂದಿಗೆ ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ. ವಿವಿಧ ವಿಭಾಗಗಳಲ್ಲಿ ನಡೆದ ಸಿಇಟಿ ಪರೀಕ್ಷೆಯಲ್ಲಿ ಎಕ್ಸಲೆಂಟ್ ಸಂಸ್ಥೆಯ ವಿದ್ಯಾರ್ಥಿಗಳು ನೂರರ ಒಳಗೆ 11 ರ‍್ಯಾಂಕ್, ಐದುನೂರರ ಒಳಗೆ 44 ರ‍್ಯಾಂಕ್, ಸಾವಿರದ ಒಳಗೆ 92ರ‍್ಯಾಂಕ್ ಗಳನ್ನು ಪಡೆದು ರಾಜ್ಯದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ವೃತ್ತಿಪರ ಕೋರ್ಸುಗಳ ಪ್ರವೇಶಾತಿಗಾಗಿ ಅರ್ಹತೆ ಗಳಿಸಿದ್ದಾರೆ.