ಮೂಡುಬಿದಿರೆ; ಆಗಸ್ಟ್ 26 ಶನಿವಾರ;
ಕಲ್ಲಬೆಟ್ಟು ಇಲ್ಲಿನ ಎಕ್ಸಲೆಂಟ್ ವಿದ್ಯಾಸಂಸ್ಥೆಯ ದ್ವಿತೀಯ ವಾಣಿಜ್ಯ ವಿಭಾಗ ದ ವಿದ್ಯಾರ್ಥಿಗಳಿಗೆ ಪುತ್ತೂರು ಪರಿಸರದ ಕೈಗಾರಿಗಾ ಕೇಂದ್ರಗಳಿಗೆ ಅಧ್ಯಯನ ಭೇಟಿ ಹಮ್ಮಿಕೊಳ್ಳಲಾಯಿತು. ಪುತ್ತೂರಿನ ದರ್ಬೆಯ ಕ್ಯಾಂಪ್ಕೋ ಚಾಕೋಲೇಟ್ ಫ್ಯಾಕ್ಟರಿ, ಕಲ್ಲಾರೆಯ ಬಿಂದು ಫ್ಯಾಕ್ಟರಿ , ನಗರ ದ ಮಾಸ್ಟರ್ ಪ್ಲಾನರಿ ಸಂಸ್ಥೆಗಳಿಗೆ ಭೇಟಿ ನೀಡಿದರು.
ಪುತ್ತೂರಿನ ಕ್ಯಾಂಪ್ಕೋ ಚಾಕೋಲೇಟ್ ಫ್ಯಾಕ್ಟರಿ ಗೆ ಭೇಟಿ ನೀಡಿದ ವಿದ್ಯಾರ್ಥಿಗಳಿಗೆ ಅಲ್ಲಿನ ವಿವಿಧ ಉತ್ಪನ್ನಗಳು ಮತ್ತು ಮಾರುಕಟ್ಟೆಯ ಬಗ್ಗೆ ಸಿಬಂದಿ ರಾಜೇಶ್ ಮಾಹಿತಿ ನೀಡಿದರು. ಕಲ್ಲಾರೆಯ ಬಿಂದು ಫ್ಯಾಕ್ಟರಿ ಯಲ್ಲಿ ಅಲ್ಲಿನ ಸಿಬಂದಿ ಗಳಾದ ಸುರೇಶ್ ಹಾಗೂ ಭರತ್ ಇವರು ಬಿಂದು ವಾಟರ್, ಸಿಪೋನ್, ಜೀರಾ ಹಾಗೂ ಇತರ ಉತ್ಪನ್ನಗಳ ಬಗ್ಗೆ ವಿವರಿಸಿದರು. ಪುತ್ತೂರು ನಗರದ ಮಾಸ್ಟರ್ ಪ್ಲಾನರಿ ಯ ಸಿಬಂದಿಗಳಾದ ಮೀನಾಕ್ಷಿ, ಕಿಶೋರ್ ಸಿಮೆಂಟ್ ಆಧಾರಿತ ವಿವಿಧ ಉತ್ಪನ್ನಗಳ ಬಗ್ಗೆ ತಿಳಿಸಿದರು. ಈ ಸಂದರ್ಭ ವಿದ್ಯಾರ್ಥಿಗಳ ಜೊತೆ ವಿಭಾಗ ಮುಖ್ಯಸ್ಥ ಪ್ರಶಾಂತ್ ಶೆಟ್ಟಿ, ಹಾಗೂ ಉಪನ್ಯಾಸಕಿ ವಿಲ್ಮಾ ಉಪಸ್ಥಿತರಿದ್ದರು.