ವಿದ್ಯಾರ್ಥಿ - ಉಪನ್ಯಾಸಕರ ಕಾರ್ಯಾಗಾರದಲ್ಲಿ - ಡಾ|| ನಾ. ಸೋಮೇಶ್ವರ, ಬೆಂಗಳೂರು
ವಿದ್ಯಾರ್ಥಿ - ಉಪನ್ಯಾಸಕರ ಕಾರ್ಯಾಗಾರದಲ್ಲಿ ಥಟ್ ಅಂತ ಹೇಳಿ ಖ್ಯಾತಿಯ - ಡಾ|| ನಾ. ಸೋಮೇಶ್ವರ, ಬೆಂಗಳೂರು ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು. ಅಕ್ಟೊಬರ್ 28 ರಂದು ವಿದ್ಯಾರ್ಥಿಗಳಿಗಾಗಿ " ಓದಿದ್ದನ್ನು ನಾವೇಕೆ ಮರೆಯುತ್ತೇವೆ " ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು ಹಾಗೂ ವಿದ್ಯಾರ್ಥಿ ಗಳೊಂದಿಗೆ ಸಂವಾದ ನಡೆಸಿದರು. ಅಕ್ಟೊಬರ್ 29 ರಂದು ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಶಿಕ್ಷಕ ಹಾಗು ಉಪನ್ಯಾಸಕರುಗಳಿಗೆ " ಉತ್ತಮ ಅಧ್ಯಾಪಕರ ಹತ್ತು ಗುಣಲಕ್ಷಣಗಳು" ಎಂಬ ವಿಷಯದ ಬಗ್ಗೆ ಕಾರ್ಯಾಗಾರ ನಡೆಸಿಕೊಟ್ಟರು. ಕೊನೆಯಲ್ಲಿ ಶಿಕ್ಷಕರೊಂದಿಗೆ ಸಂವಾದ ನಡೆಸಿದರು. ಸಂಸ್ಥೆಯ ಅಧ್ಯಕ್ಷರಾದ ಶ್ರೀ ಯುವರಾಜ್ ಜೈನ್, ಪ್ರಾಂಶುಪಾಲರಾದ ಶ್ರೀ ಪ್ರದೀಪ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.