'ಸೈಬರ್ ಸೆಕ್ಯೂರಿಟಿ ಸ್ಕೂಲ್ ಹೈಜೀನ್ ಕಾರ್ಯಕ್ರಮ' ದ ಉದ್ಘಾಟಕರಾಗಿ ಶ್ರೀ ಯದುವೀರ ಒಡೆಯರ್

ಇದೇ ಬರುವ ಫೆಬ್ರವರಿ 25 ನೇ ತಾರೀಕಿನಂದು ಎಕ್ಸಲೆಂಟ್ ಶಿಕ್ಷಣ ಸಂಸ್ಥೆ ಹಾಗೂ ಸೈಬರ್ ವರ್ಸ್ ಫೌಂಡೇಶನ್ ಸಹಯೋಗದಲ್ಲಿ ನಡೆಯಲಿರುವ 'ಸೈಬರ್ ಸೆಕ್ಯೂರಿಟಿ ಸ್ಕೂಲ್ ಹೈಜೀನ್ ಕಾರ್ಯಕ್ರಮ' ದ ಉದ್ಘಾಟಕರಾಗಿ ಆಗಮಿಸಲಿರುವ ಮೈಸೂರು ಮಹಾಸಂಸ್ಥಾನದ ಶ್ರೀಮನ್ಮಹಾರಾಜರಾದ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಯುವರಾಜ್ ಜೈನ್ ಅವರು ಆಮಂತ್ರಿಸಿದರು. ಈ ಸಂದರ್ಭದಲ್ಲಿ ವೇಣೂರು ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕದ ಆಮಂತ್ರಣವನ್ನೂ ಮಹಾರಾಜರಿಗೆ ನೀಡಲಾಯಿತು. ಈ ಸಂದರ್ಭದಲ್ಲಿ ಅಳದಂಗಡಿ ಸೀಮೆಯ ಅರಸರಾದ ಶ್ರೀ ಪದ್ಮಪ್ರಸಾದ್ ಅಜಿಲರು ಹಾಗೂ ಮೂಲ್ಕಿ ಸೀಮೆಯ ಅರಸರಾದ ಶ್ರೀ ದುಗ್ಗಣ್ಣ ಸಾವಂತರು ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

Click here to View All