Cook Without Fire -Food Fest By Commerce Association - 27-9-2023

Commerce Association of Excellent PU College organized Cook Without Fire Competition for commerce students on 27th Sept 2023. 25 Groups prepared variety of items and presented before the judges. Secretary of Excellent Institutions Mrs Rashmitha Jain graced the occasion. ಸೆಪ್ಟೆಂಬರ್ 27, ಗುರುವಾರ; ಎಕ್ಸಲೆಂಟ್ ಮೂಡುಬಿದ್ರೆ ವಿದ್ಯಾಸಂಸ್ಥೆಯ ಪದವಿಪೂರ್ವ ವಿಭಾಗದ ವಾಣಿಜ್ಯ ಸಂಘ ದ ವತಿಯಿಂದ ವಿದ್ಯಾರ್ಥಿಗಳಿಗೆ ಅಹಾರೋತ್ಸವ ಸ್ಪರ್ಧಾ ಕಾರ್ಯಕ್ರಮ ನಡೆಸಲಾಯಿತು. ವಾಣಿಜ್ಯ ಸಂಘದ ಇಪ್ಪತ್ತನಾಲ್ಕು ತಂಡಗಳು ಬೆಂಕಿ ಉಪಯೋಗ ರಹಿತ ವಿವಿಧ ತಿನಿಸುಗಳನ್ನು ಮಾಡಿ ಪ್ರದರ್ಶಿಸಿದರು. ಸ್ಪರ್ಧೆಯ ತೀರ್ಪುಗಾರರಾಗಿ ಭಾಗವಹಿಸಿದ ಮಂಗಳೂರಿನ ಶ್ರೀಮತಿ ಭವಾನಿ ಉಪಾದ್ಯಾಯ , ಮೂಡಬಿದಿರೆಯ ಶ್ರೀಮತಿ ಅಪೇಕ್ಷ ಜೈನ್ ಹಾಗೂ ಶ್ರೀಮತಿ ರೇಷ್ಮಾವರ್ಮಾ ಜೈನ್ ವಿದ್ಯಾರ್ಥಿಗಳ ವಿವಿಧ ತಿನಿಸು ಗಳು ಹಾಗೂ ಅವರ ಸೃಜನಶೀಲತೆ ಯನ್ನು ಪ್ರಶಂಸಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಹಾಗೂ ಕಾರ್ಯದರ್ಶಿ ರಶ್ಮಿತಾ ಜೈನ್ ಉಪಸ್ಥಿತರಿದ್ದು ವಿದ್ಯಾರ್ಥಿಗಳ ಸಕ್ರೀಯ ಭಾಗವಹಿಸುವಿಕೆಯನ್ನು ಶ್ಲಾಘಿಸಿದರು. ವಾಣಿಜ್ಯ ವಿಭಾಗ ಮುಖ್ಯಸ್ಥ ಪ್ರಶಾಂತ್ ಶೆಟ್ಟಿ, ಸಂಯೋಜಕಿ ಸಂಧ್ಯಾ ಕುಮಾರಿ, ಉಪನ್ಯಾಸಕರಾದ ಪ್ರದೀಪ್ ಹಾಗೂ ಅಶೋಕ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಮೋಕ್ಷ ಜೈನ್ ನಿರೂಪಿಸಿ, ಸ್ವಾಗತಿಸಿದರು. ವಿದ್ಯಾರ್ಥಿನಿ ಸಂಸ್ಕೃತಿ ವಂದಿಸಿದರು.