ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ಸಂವಿಧಾನದ ಪೀಠಿಕೆಯನ್ನು ವಾಚಿಸುವ ಮೂಲಕ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದ ಪ್ರಾಸ್ತವಿಕ ಮಾತುಗಳನ್ನಾಡಿದ ಎಕ್ಸಲೆಂಟ್ ಆಂಗ್ಲಮಾಧ್ಯಮ ಶಾಲೆಯ ಸಹ ಮುಖ್ಯಶಿಕ್ಷಕ ಶ್ರೀ ಜಯಶೀಲ್, ಭಾರತೀಯ ಸಂವಿಧಾನ ಪ್ರಪಂಚದ ಉಳಿದ ದೇಶದಗಳ ಸಂವಿಧಾನಕ್ಕಿಂತ ಹೇಗೆ ಭಿನ್ನ ಮತ್ತು ವಿಶಿಷ್ಟವಾಗಿದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿ ಕೊಟ್ಟರು. ಅವರು ಸಂವಿಧಾನ ದಿನದ ಮಹತ್ವವನ್ನು ತಿಳಿಸಿಕೊಟ್ಟು, ಸಂವಿಧಾನರಚನೆ ಮಾಡಿದ ಎಲ್ಲಾ ನಾಯಕರುಗಳನ್ನು ನಾವು ಸಂವಿಧಾನ ದಿನಾಚರಣೆಯ ಸಂದರ್ಭದಲ್ಲಿ ನೆನಪಿಸಿಕೊಳ್ಳುವುದರೊಂದಿಗೆ ಸಂವಿಧಾನದ ಆದರ್ಶಗಳನ್ನು ಗೌರವಿಸಬೇಕು ಎಂದು ಮನದಟ್ಟು ಮಾಡಿದರು. ಸಮಾಜ ವಿಜ್ಞಾನ ಶಿಕ್ಷಕ ಶ್ರೀ ದಾಮೋದರ ಸಂವಿಧಾನದ ಪೀಠಿಕೆಯನ್ನು ವಾಚಿಸಿದರು. ಮುಖ್ಯಶಿಕ್ಷಕ ಶ್ರೀ ಶಿವಪ್ರಸಾದ್ ಸ್ವಾಗತಿಸಿದರು. ಉಪಪ್ರಾಂಶುಪಾಲ ಶ್ರೀ ಮನೋಜ್ ಕುಮಾರ್ ಉಪಸ್ಥಿತರಿದ್ದರು.