ಪ್ರತಿಯೊಂದು ಭಾಷೆಯೂ ಒಂದೊಂದು ವರ. ಹಿಂದಿ ಭಾಷೆ ರಾಷ್ಟ್ರವನ್ನು ಜೋಡಿಸುವ ಭಾಷೆ ಎಂದು ಭುವನೇಂದ್ರ ಕಾಲೇಜಿನ ಹಿಂದಿ ಉಪನ್ಯಾಸಕ ಡಾ. ಅಶೋಕ್ ಕ್ಲಿಫರ್ಡ್ ಡಿಸೋಜಾ ಹೇಳಿದರು. ಸಭೆಯ ಅಧ್ಯಕ್ಷತೆಯನ್ನು ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ ವಹಿಸಿದ್ದರು. ಮುಖ್ಯೋಪಾಧ್ಯಾಯ ಶಿವಪ್ರಸಾದ್ ಭಟ್ , ಅಧ್ಯಾಪಕರಾದ ನವೀನ್, ಸುಪ್ರಿಯ ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕಿ ಉಪನ್ಯಾಸಕಿ ದಿವ್ಯಲಕ್ಶ್ಮೀ ರೈ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹರ್ಷಲ್ ಸ್ವಾಗತಿಸಿ, ನವ್ಯಾ ವಂದಿಸಿದರು. ಮುಕ್ತಾ ಕಾರ್ಯಕ್ರಮ ನಿರುಪಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಕವ್ವಾಲಿ, ಗಝಲ್ ಗಳು ಪ್ರಸ್ತುತಿಗೊಂಡವು.