ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ‘ಎಐ ಓಟಿಂಗ್ ಮೆಷಿನ್ ‘ ಸೌತ್ ಝೋನ್ ಫೈನಲ್ಸ್ಗೆ ಆಯ್ಕೆ*
ದಕ್ಷಿಣ ಭಾರತದ ಮಟ್ಟದಲ್ಲಿ ಆಯೋಜಿಸಲಾದ ಪ್ರತಿಷ್ಠಿತ ಮ್ಯಾಕ್ಮಿಲನ್ ಬಡ್ಡಿಂಗ್ ಸೈಂಟಿಸ್ಟ್ ಸ್ಪರ್ಧೆಯ ಸೌತ್ ಝೋನ್ ಅಂತಿಮ ಹಂತಕ್ಕೆ, ಕರ್ನಾಟಕ ರಾಜ್ಯದಿಂದ ಆಯ್ಕೆಯಾಗಿರುವ ಏಕೈಕ ತಂಡ ಮೂಡಬಿದಿರೆಯ ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ತಂಡ ಎಂಬುದು ನಮ್ಮೆಲ್ಲರ ಘನತೆ ಮತ್ತು ಹೆಮ್ಮೆಯ ಸಂಗತಿ.
ನಮ್ಮ ಪ್ರತಿಭಾಶಾಲಿ ವಿದ್ಯಾರ್ಥಿಗಳಾದ
ಅಭಿನೀತ್,
ಪ್ರಮತ್ ಪೈ,
ಅರ್ವಿನ್ ರಿಷೋನ್ ಡಿ’ಕೋಸ್ಟಾ
ಇವರು ಒಟ್ಟಾಗಿ ತಯಾರಿಸಿದ ನವೀನ “ಎಐ ಓಟಿಂಗ್ ಮೆಷಿನ್” ತಾಂತ್ರಿಕ ಮಾದರಿಯು ಐಐಟಿ ಮದ್ರಾಸ್ ಅವರ ಪರಿಶೀಲನೆಯಲ್ಲಿ ವಿಶೇಷ ಮೆಚ್ಚುಗೆ ಪಡೆದು ಅಂತಿಮ ಹಂತಕ್ಕೆ ಆಯ್ಕೆಯಾಗಿರುತ್ತದೆ.
ಈ ಸಾಧಕರ ತಂಡವು ಜನವರಿ 23 ಮತ್ತು 24ರಂದು ಮದ್ರಾಸ್ನ ಐಐಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಲಿರುವ ಸೌತ್ ಝೋನ್ ಫೈನಲ್ಸ್ ನಲ್ಲಿ ನಮ್ಮ ಸಂಸ್ಥೆಯನ್ನು ಪ್ರತಿನಿಧಿಸಲಿದ್ದಾರೆ.
ಈ ಮಹತ್ವದ ಸಾಧನೆಗಾಗಿ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷರಾದ ಶ್ರೀ ಯುವರಾಜ್ ಜೈನ್, ಕಾರ್ಯದರ್ಶಿಗಳಾದ ರಶ್ಮಿತಾ ಜೈನ್, ಮುಖ್ಯೋಪಾಧ್ಯಾಯರು, ಹಾಗೂ ಬೋಧಕ ಬೋಧಕೇತರ ಸಿಬ್ಬಂದಿಗಳು ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ.