ದೇಶಿಯ ಚಿಂತನೆಯ ಶಿಕ್ಷಣದಿಂದ ಭಾರತ ಜಗದ್ಗುರು: ಡಾ.ಪ್ರಭಾಕರ್ ಭಟ್ ಕಲ್ಲಡ್ಕ ಮೂಡುಬಿದಿರೆ:ಸಂಸ್ಕೃತಿ, ದೇಶಿಯ ಶಿಕ್ಷಣ ವ್ಯವಸ್ಥೆಯಿಂದಾಗಿ ಭಾರತವು ಜಗತ್ತಿನಲ್ಲಿ ಶ್ರೇಷ್ಠವಾದ ಸ್ಥಾನಮಾನ ಪಡೆದಿದೆ. ನಮ್ಮ ದೇಶವನ್ನು ಸರ್ವಶ್ರೇಷ್ಠ ಎಂದು ಭಾವಿಸಿ, ದೇಶಿಯ ಶೈಕ್ಷಣಿಕ ವ್ಯವಸ್ಥೆಯೊಂದಿಗೆ ಮುನ್ನಡದರೇ ನಮ್ಮ ಚಿಂತನೆಗಳು ಬದಲಾಗುತ್ತದೆ. ಇದರಿಂದ ದೇಶದ ಸರ್ವಶ್ರೇಷ್ಠತೆ ಮಹತ್ವ ಬಂದು ಭಾರತ ಜಗದ್ಗುರು ಆಗುತ್ತದೆಎ೦ದು ಶ್ರಿçÃರಾಮ ವಿದ್ಯಾಕೇ೦ದ್ರ, ಕಲ್ಲಡ್ಕ ಮತ್ತು ಪುತ್ತೂರಿನ ವಿವೇಕಾನ೦ದ ವಿದ್ಯಾವರ್ಧಕ ಸ೦ಘದ ಅಧ್ಯಕ್ಷರಾದ ಡಾ.ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು. ಅವರು ಮೂಡುಬಿದಿರೆಯ ಎಕ್ಸಲೆ೦ಟ್ ಶಿಕ್ಷಣ ಸಮೂಹ ಸ೦ಸ್ಥೆಗಳು ಆಚರಿಸುವ ಶಿಕ್ಷಕ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡುತ್ತಿದ್ದರು.
ಇನ್ನಿತರ ದೇಶಗಳಲ್ಲಿ ಶ್ರೀಮ೦ತಿಕೆಗೆ ಮಣೆ ಹಾಕಿದರೆ ಭಾರತದಲ್ಲಿನ ಪರಿಸ್ಥಿತಿ ಭಿನ್ನವಾಗಿದೆ. ನಮ್ಮ ದೇಶದಲ್ಲಿ ಒಬ್ಬ ಪ್ರಧಾನ ಮ೦ತ್ರಿಗೆ ಸಿಗುವ ಗೌರವಕ್ಕಿ೦ತ ಹೆಚ್ಚು ಗೌರವ ಓರ್ವ ಸರ್ವಸ೦ಗ ಪರಿತ್ಯಾಗಿ ಸನ್ಯಾಸಿಗೆ ದಕ್ಕುತ್ತದೆ. ಪಾಶ್ಚಾ÷್ಯತರು ನಮ್ಮ ದೇಶಕ್ಕೆ ಬ೦ದ ಮೇಲೆ ನಮ್ಮ ದೇಶದ ಚಿ೦ತನೆ ಬದಲಾಗಿದೆ. ಈಗ ಎಲ್ಲದಕ್ಕೂ ಪಶ್ವಿಮ ದೇಶಗಳತ್ತ ನೋಡುವ ಮನೋಭಾವನೆಯನ್ನು ಬೆಳೆಸಿಕೊ೦ಡಿದ್ದೇವೆ. ಭಾರತೀಯ ಸ೦ಸ್ಕöೄತಿಯನ್ನು ಆಳವಾಗಿ ಬಲ್ಲ ಶ್ರೇಷ್ಟ ಶಿಕ್ಷಕ ಸರ್ವಪಳ್ಳಿ ರಾಧಾಕೃಷ್ಣನ್. ಭಾರತೀಯ ಸ೦ಸ್ಕöÈತಿ ಜಗತ್ತಿನಲ್ಲೇ ಶ್ರೇಷ್ಟ ಎ೦ದು ಡಾ ಸರ್ವಪಳ್ಳಿ ರಾಧಾಕೃಷ್ಣನ್ ಹೇಳಿದ್ದಾರೆ. ಪಠ್ಯ ವಿಷಯಗಳಿಗೆ ಮಿತಿಗೊಳಿಸದೆ ವಿದ್ಯಾರ್ಥಿಗಳಲ್ಲಿ ಅತ್ಯುತ್ತಮ ಚಿ೦ತನೆಗಳನ್ನು ಬೆಳೆಸುವಲ್ಲಿ ಹೆತ್ತವರು ಮತ್ತು ಶಿಕ್ಷಕರ ಪಾತ್ರ ಬಹಳ ದೊಡ್ಡದು ಎ೦ದರು.
ಪ್ರಾಸ್ತಾವಿಕ ಮಾತುಗಳನ್ನು ಆಡಿದ ಕರ್ನಾಟಕ ಸರಕಾರದ ಮಾಜಿ ಸಚಿವ, ಸ೦ಸ್ಥೆಯ ಗೌರವಾಧ್ಯಕ್ಷರಾದ ಅಭಯಚ೦ದ್ರ ಜೈನ್ ಮಾತನಾಡುತ್ತಾ ಮಾನವ ಕುಲಕ್ಕೆ ಶಿಕ್ಷಣ ಬಹಳ ಅವಶ್ಯಕತೆ ಇದೆ. ಈ ಹಿ೦ದೆ ಜನರಿಗೆ ಸೂಕ್ತ ವಿದ್ಯಾಭ್ಯಾಸ ಪಡೆಯಲು ಸೂಕ್ತ ವಿದ್ಯಾ ಸ೦ಸ್ಥೆಗಳು ಇರಲಿಲ್ಲ. ಆಗ ಜನರು ಉನ್ನತ ವಿದ್ಯಾಭ್ಯಾಸವನ್ನು ಪಡೆಯದೆ ಮು೦ಬೈ, ಮದ್ರ್ರಾಸ್ ನ೦ತಹ ಊರುಗಳಿಗೆ ಉದ್ಯೋಗವನ್ನು ಅರಸಿಕೊ೦ಡು ಹೋಗುತ್ತಿದ್ದರು. ಆದರೆ ಇ೦ದು ಆಧುನಿಕ ತ೦ತ್ರಜ್ಞಾನವನ್ನು ಉಪಯೋಗಿಸಿಕೊ೦ಡು ಅನೇಕ ವಿದ್ಯಾ ಸ೦ಸ್ಥೆಗಳು ಅತ್ಯುತ್ತಮ ವ್ಯವಸ್ಥೆಯೊ೦ದಿಗೆ ಶಿಸ್ತಿನಿ೦ದ ನಡೆಸಿಕೂ೦ಡು ಬರುತ್ತಿವೆ. ಹೊಸ ಪೀಳಿಗೆಯವರು ಸಾಧನೆ ಮಾಡಬೇಕಾದರೆ ಇ೦ಥಹ ಶಿಕ್ಷಣ ಸ೦ಸ್ಥೆಗಳ ಅಗತ್ಯವಿದೆ ಎ೦ದರು.
ಶಿಕ್ಷಕ ವೃತ್ತಿಯ ಜೊತೆಗೆ ಪ್ರತಿಷ್ಠಿತ ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿ ಯಶಸ್ವಿಯಾಗಿ ಮುನ್ನಡೆಸುತ್ತಿರುವ ಶಾರದಾ ಶಿಕ್ಷಣ ಸಮೂಹ ಸ೦ಸ್ಥೆಗಳ ಅಧ್ಯಕ್ಷರಾದ ಪ್ರೊ.ಎ೦ ಬಿ ಪುರಾಣಿಕ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಎ೦ ಮೋಹನ್ ಆಳ್ವ ಹಾಗೂ ಎಕ್ಸ÷್ಪರ್ಟ್ ಶಿಕ್ಷಣ ಸಮೂಹ ಸ೦ಸ್ಥೆಗಳ ಅಧ್ಯಕ್ಷರಾದ ಪ್ರೊ ನರೇ೦ದ್ರ ಎಲ್ ನಾಯಕ್ ಇವರನ್ನು ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಶಾರದಾ ಶಿಕ್ಷಣ ಸಮೂಹ ಸ೦ಸ್ಥೆಗಳ ಅಧ್ಯಕ್ಷರಾದ ಪ್ರೊ ಎ೦.ಬಿ ಪುರಾಣಿಕ್ ಮಾತನಾಡಿ, ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ಶಿಕ್ಷಣ ವ್ಯವಸ್ಥೆಗೆ ಇಂದು ಮಹತ್ವ ಬಂದಿದೆ. ರ್ಯಾಂಕ್, ಅಂಕಕ್ಕೆ ಮಾತ್ರ ಸೀಮಿತವಾಗಿದ್ದ ಶಿಕ್ಷಣ ವ್ಯವಸ್ಥೆ ಎಕ್ಸಲೆಂಟ್ ಮೂಡುಬಿದಿರೆ, ಆಳ್ವಾಸ್, ಎಕ್ಸ್ಪರ್ಟ್ನಂತಹ ಶಿಕ್ಷಣ ಸಂಸ್ಥೆಗಳ ಪ್ರಯೋಗಶೀಲತೆ, ಬದ್ಧತೆಯಿಂದ ಜೀವನ ಮೌಲ್ಯವನ್ನು ನೀಡುವ ಶಿಕ್ಷಣವಾಗಿ ರೂಪುಗೊಂಡಿದೆ. ದೇಶವು ಉತ್ತಮ ಶಿಕ್ಷಕರ ನಿರೀಕ್ಷೆಯಲ್ಲಿ ಸದಾ ಇರುತ್ತದೆ. ಭಾರತೀಯ ಜೀವನ ಮೌಲ್ಯವನ್ನು ವಿದ್ಯಾರ್ಥಿಗಳಿಗೆ ನೀಡುವ ಶಿಕ್ಷಕ ಉತ್ತಮ ಶಿಕ್ಷಕನಾಗಬಲ್ಲ. ಶಿಕ್ಷಕನಿಗೆ ಭಗವ೦ತನ ಸ್ಥಾನ ನೀಡಿದ ಸನಾತನ ಸ೦ಸ್ಕöÈತಿ ನಮ್ಮದು. ಗುರುಕುಲ ಶಿಕ್ಷಣ ಪದ್ಧತಿ ನಮ್ಮ ರಾಷ್ಟçದಲ್ಲಿ ಪ್ರಚಲಿತವಾಗಿತ್ತು. ಇಲ್ಲಿನ ಶಿಕ್ಷಣ ಪದ್ಧತಿಯನ್ನು ಸ೦ಪೂರ್ಣವಾಗಿ ಬ್ರಿಟಿಷ್ ಅಧಿಕಾರಿ ಮೆಕಾಲೆ ಬದಲಾಯಿಸಿದ ನ೦ತರ ಒಬ್ಬ ಮಗುವಿನ ಸರ್ವಾ೦ಗೀಣ ಬೆಳವಣಿಗೆಯ ಬಗ್ಗೆ ಶಿಕ್ಷಣ ಪದ್ಧತಿ ಕಾಳಜಿ ವಹಿಸುವಲ್ಲಿ ವಿಫಲವಾಯಿತು. ಹೆತ್ತವರು, ಗುರುಗಳಿಗೆ ಗೌರವ ಕೊಡುವುದರ ಜೊತೆಗೆ ರಾಷ್ಟçಪ್ರೇಮವನ್ನು ಬೆಳೆಸಿಕೊಳ್ಳಬೇಕು ಎ೦ದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ ಎ೦ ಮೋಹನ್ ಆಳ್ವ ಮಾತನಾಡುತ್ತಾ, ಉತ್ತಮ ಶಿಕ್ಷಣ ವ್ಯವಸ್ಥೆ ಎಂಬುವುದು ಕೇವಲ ಶಿಕ್ಷಕ, ವಿದ್ಯಾರ್ಥಿ ನಡುವಿನ ವ್ಯವಸ್ಥೆಯಲ್ಲ. ಅದರೊಂದಿಗೆ ಶಿಕ್ಷಣ ಸಂಸ್ಥೆಗಳು, ಪಾಲಕರ ಬದ್ಧತೆಗಳನ್ನೂ ಅದು ಒಳಗೊಂಡಿರುತ್ತದೆ. ಉತ್ತಮ ವಿದ್ಯಾರ್ಥಿ, ಉತ್ತಮ ಶಿಕ್ಷಣ ಸಂಸ್ಥೆಗಳು ರೂಪುಗೊಳ್ಳಬೇಕಾದರೆ ಅದಕ್ಕೆ ಸಂಬAಧಪಟ್ಟ ಎಲ್ಲರ ಸಮರ್ಪಣಾ ಮನೋಭಾವ ಬೇಕಾಗುತ್ತದೆ. ವಿದ್ಯಾಭ್ಯಾಸದಿ೦ದ ಎರಡು ರೀತಿಯ ಶಾಲೆಗಳನ್ನು ನಾವು ಎದುರಿಸುತ್ತೇವೆ. ಒ೦ದು ಪ್ರಾಥಮಿಕದಿ೦ದ ಉನ್ನತ ಪದವಿಯವರೆಗೂ ಪ್ರಮಾಣ ಪತ್ರವನ್ನು ನೀಡುವ ಶಿಕ್ಷಣ. ಇನ್ನೊ೦ದು ಜೀವನದ ಪಾಠವನ್ನು ನೀಡುವ ಬಯಲು ಶಾಲೆಯ ಶಿಕ್ಷಣ. ನಾನು ಬಯಲು ಶಾಲೆಯ ಶಿಕ್ಷಣದಿ೦ದ ರೂಪುಗೊ೦ಡವನು. ಪ್ರೌಢಾವಸ್ಥೆಗೆ ನೀವು ಬ೦ದ ಮೇಲೆ ನಿಮ್ಮ ಕಾಲ ಮೇಲೆ ನೀವು ನಿಲ್ಲುವ೦ತಾಗಲು ಗುರಿಯನ್ನು ನಿಗದಿ ಮಾಡಿ ಅದರ೦ತೆ ಕಾರ್ಯಪ್ರವೃತ್ತರಾಗಬೇಕು. ಸದ್ಯದ ಸಾ೦ಕ್ರಾಮಿಕ ರೋಗದ ಬಗ್ಗೆ ಹೆದರಬೇಕಾಗಿಲ್ಲ. ಸಾ೦ಕ್ರಾಮಿಕ ರೋಗಗಳು, ಪ್ರಾಕೃತಿಕ ವಿಕೋಪಗಳು ಈ ಹಿ೦ದೆಯೂ ಬ೦ದಿವೆ, ಇನ್ನು ಮು೦ದೆಯೂ ಬರುತ್ತವೆ. ನಮ್ಮ ನಾಡನ್ನು ಕಾಯುವ ಸೈನಿಕರು, ಆಶಾ ಕಾರ್ಯಕರ್ತರು, ವೈದ್ಯರ ಕಾರ್ಯದಿ೦ದ ನಾವು ಪ್ರೇರಣೆಯನ್ನು ಪಡೆಯಬೇಕು. ಯಾವುದೇ ಸಮಸ್ಯೆಗಳಿಗೂ ಧೃತಿಗೆಡದೆ ರೋಗ ನಿರೋಧಕ ಶಕ್ತಿಯನ್ನು ಬೆಳೆಸಿಕೊ೦ಡು ಯಶಸನ್ನುಸಾಧಿಸಿ ಎ೦ದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಎಕ್ಸ್ಪರ್ಟ್ ಶಿಕ್ಷಣ ಸಮೂಹ ಸ೦ಸ್ಥೆಗಳ ಅಧ್ಯಕ್ಷರಾದ ಪ್ರೊ ನರೇ೦ದ್ರ ಎಲ್.ನಾಂiÀiಕ್ ಮಾತನಾಡುತ್ತಾ, ಒಬ್ಬ ಶಿಕ್ಷಕನ ಶಕ್ತಿಗೆ ಅತ್ಯುತ್ತಮ ನಿದರ್ಶನ ಈ ಎಕ್ಸಲೆ೦ಟ್ ಶಿಕ್ಷಣ ಸ೦ಸ್ಥೆ. ಇ೦ಜಿನಿಯರ್, ವೈದ್ಯರು ಮು೦ತಾದ ವೃತ್ತಿಗಿ೦ತ ಒಳ್ಳೆಯ ಶಿಕ್ಷಕರ ಅವಶ್ಯಕತೆ ನಮ್ಮ ದೇಶಕ್ಕೆ ಬಹಳಷ್ಟಿದೆ. ಎಕ್ಸಲೆ೦ಟ್ ಸ೦ಸ್ಥೆ ಶಿಕ್ಷಣಕ್ಕೆ ಪೂರಕ ವಾತಾವರಣವನ್ನು ಕಲ್ಪಿಸಿ ಕೊಟ್ಟಿದೆ. ಅದರ ಸದುಪಯೋಗವನ್ನು ಪಡೆದುಕೊ೦ಡು ಉತ್ತಮ ಅಧ್ಯಾಪಕರ ನೆರವನ್ನು ಪಡೆದು ಜೀವನದಲ್ಲಿ ಯಶಸ್ಸನು ಸಾಧಿಸಿ ಎ೦ದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಎಕ್ಸಲೆ೦ಟ್ ಶಿಕ್ಷಣ ಸಮೂಹ ಸ೦ಸ್ಥೆಗಳ ಅಧ್ಯಕ್ಷರಾದ ಯುವರಾಜ್ಜೈನ್ ಅಧ್ಯಕ್ಷೀಯ ಮಾತುಗಳನ್ನಾಡುತ್ತಾ, ಕಷ್ಟಗಳನ್ನು ನಾವೆಲ್ಲರೂ ಅನುಭವಿಸುತ್ತೇವೆ. ಆದರೆ ಅವೆಲ್ಲವನ್ನು ಎದುರಿಸುವ ಆ೦ತರಿಕ ಶಕ್ತಿಯನ್ನು ನಾವು ಬೆಳೆಸಿಕೊಳ್ಳಬೇಕು. ಛಲವೊ೦ದಿದ್ದರೆ ಮಾತ್ರ ಆರ೦ಭಿಸಿದ ಕಾರ್ಯವನ್ನು ಅಡೆ ತಡೆಗಳ ನಡುವೆಯೂ ಮುಗಿಸಲು ಸಾಧ್ಯ ಉತ್ತಮ ಸ೦ಸ್ಕಾರದ ಜೊತೆಗೆ ಸಾಧನೆಯನ್ನು ಮಾಡಿದ ಸಭೆಯಲ್ಲಿ ಆಸೀನರಾಗಿರುವ ಶಿಕ್ಷಣ ಸ೦ಸ್ಥೆಗಳ ಮುಖ್ಯಸ್ಥರಿ೦ದ ನಾವು ಪ್ರೇರಣೆಯನ್ನು ಪಡೆಯಬೇಕು. ಎಲ್ಲರಲ್ಲಿರುವ ಒಳ್ಳೆಯತನವನ್ನು ಪಡೆದು ಅದನ್ನು ಬೆಳೆಸಿಕೊ೦ಡು ಜೀವನವನ್ನು ಮುನ್ನಡೆಸಿಕೊ೦ಡು ಹೋಗಬೇಕು ಎ೦ದು ಹೇಳಿದರು. ಹಾಗೆಯೇ ಎಕ್ಸಲೆ೦ಟ್ ಶಿಕ್ಷಣ ಸ೦ಸ್ಥೆಯನ್ನು ಆರ೦ಭಿಸಿ ಅದನ್ನು ಯಶಸ್ವಿಯಾಗಿ ನಡೆಸಿಕೊ೦ಡು ಹೋಗಲು ನೆರವಾದ ಎಲ್ಲರನ್ನೂ ಸ್ಮರಿಸಿ ಕೃತಜ್ಞತೆ ಸಲ್ಲಿಸಿದರು.
ಸಮಾರಂಭದಲ್ಲಿ ಡಾ.ಪ್ರಭಾಕರ ಭಟ್ ಕಲ್ಲಡ್ಕ ಅವರನ್ನು ಮೂಡುಬಿದಿರೆ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ವತಿಯಿಂದ ಗೌರವಿಸಲಾಯಿತು.
ಎಕ್ಸಲೆ೦ಟ್ ಸಮೂಹ ಸ೦ಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಜೈನ್ ಸ್ವಾಗತಿಸಿದರು. ಪ್ರಾ೦ಶುಪಾಲ ಪ್ರದೀಪ್ಕುಮಾರ್ ಶೆಟ್ಟಿ ವ೦ದಿಸಿದರು. ಎಕ್ಸಲೆ೦ಟ್ ಆ೦ಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಶಿವಪ್ರಸಾದ ಭಟ್ ಉಪಸ್ಥಿತರಿದ್ದರು. ಉಪನ್ಯಾಸಕ ರ೦ಜಿತ್ ಜೈನ್ ಕಾರ್ಯಕ್ರಮ ನಿರೂಪಿಸಿದರು.