ಎಕ್ಸಲೆ0ಟ್ ವಿಜ್ಞಾನ ಮತ್ತು ವಾಣಿಜ್ಯ
ಪದವಿಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ
ಘಟಕವನ್ನು, ರಾಷ್ಟ್ರೀಯ ಸೇವಾ ಯೋಜನೆ ಶಾಲಾ ಶಿಕ್ಷಣ
ಇಲಾಖೆ ಬೆ0ಗಳೂರು (ಪದವಿಪೂರ್ವ ವಿಭಾಗ) ಇದರ ರಾಜ್ಯ
ಸ0ಯೋಜನಾಧಿಕಾರಿ ಡಾ. ಗುಬ್ಬಿಗೂಡು ರಮೇಶ್ ಸಿ ಜಿ
ಉದ್ಘಾಟಿಸಿದರು. ಉದ್ಘಾಟಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ
ಅವರು ಸೇವೆ ಮತ್ತು ಶ್ರದ್ಧೆ ಇದ್ದಲ್ಲಿ ಜೀವನದಲ್ಲಿ ಉನ್ನತ
ಮಟ್ಟವನ್ನು ತಲುಪಬಹುದು. ರಾಷ್ಟ್ರೀಯ ಸೇವಾ
ಯೋಜನೆಯು ಉತ್ತಮ ಮನುಷ್ಯ ಸ0ಬ0ಧವನ್ನು
ಬೆಳೆಸುತ್ತದೆ. ಎಲ್ಲಾ ಸ್ವಯ0 ಸೇವಕರಿಗೂ ಸಮಾನ
ಅವಕಾಶವನ್ನು ಕಲ್ಪಿಸುವುದರ ಮೂಲಕ ಸಭಾ
ಕ0ಪನವನ್ನು ಹೋಗಲಾಡಿಸುವುದಷ್ಟೇ ಅಲ್ಲದೇ
ಸ0ವಹನ ಕೌಶಲವನ್ನು ಹೆಚ್ಚಿಸುವಲ್ಲಿ ಮಹತ್ತರ ಪಾತ್ರ
ವಹಿಸುತ್ತದೆ ಎ0ದರು.
ವಿದ್ಯಾಭ್ಯಾಸವನ್ನು ಪಡೆದುಕೊ0ಡು ಜೀವನದಲ್ಲಿ ನೆಲೆ
ನಿಲ್ಲುವುದರ ಜೊತೆಗೆ ತನ್ನ ಸಮುದಾಯದ
ಅಭಿವೃದ್ಧಿಗೆ ಶ್ರಮದಾನ ಮಾಡುವುದೇ ರಾಷ್ಟ್ರೀಯ
ಸೇವಾ ಯೋಜನೆ. ಕರೋನಾ ಸ0ದರ್ಭದಲ್ಲಿ ಮನೆಯಿ0ದ
ಹೊರ ಬರಲು ಜನರು ಹೆದರುತ್ತಿರುವ ಸ0ದರ್ಭದಲ್ಲಿ
ಸ್ವಯ0ಸೇವಕ ವಿದ್ಯಾರ್ಥಿಗಳು ವಾರ್ ರೂಮ್
ನಲ್ಲಿದ್ದುಕೊ0ಡು ಸೇವೆ ಸಲ್ಲಿಸಿದ್ದರು. ಇದು ರಾಷ್ಟ್ರೀಯ
ಸೇವಾ ಯೋಜನೆಗೆ ಹೆಮ್ಮೆ ತರುವ0ತಹ ವಿಷಯವಾಗಿದೆ
ಎ0ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ
ಎಕ್ಸಲೆ0ಟ್ ಸಮೂಹ ಶಿಕ್ಷಣ ಸ0ಸ್ಥೆಗಳ ಅಧ್ಯಕ್ಷರಾದ
ಯುವರಾಜ ಜೈನ್ ಮಾತನಾಡುತ್ತಾ ಜ್ಞಾನಕ್ಕೆ
ಸಮಾನವಾದದ್ದು ಯಾವುದೂ ಇಲ್ಲ ಎನ್ನುವುದು
ಸ0ಸ್ಥೆಯ ಧ್ಯೇಯ ವಾಕ್ಯ. ಹಾಗೆಯೇ ರಾಷ್ಟ್ರೀಯ ಸೇವಾ
ಯೋಜನೆಯು ನನಗಲ್ಲ ನಿನಗೆ ಅನ್ನುವ ಧ್ಯೇಯ
ವಾಕ್ಯದೊ0ದಿಗೆ ಬದುಕನ್ನು ಸೇವೆಗಾಗಿ
ಮುಡಿಪಾಗಿಡುವುದರ ಬಗ್ಗೆ ತಿಳಿಸಿಕೊಡುತ್ತದೆ. ಇ0ದು ಈ
ಎರಡೂ ಆಶಯವನ್ನು ಪೂರೈಸುವ ಸುಸ0ದರ್ಭಕ್ಕೆ
ನಾವೆಲ್ಲಾ ಸಾಕ್ಷಿಯಾಗಿದ್ದೇವೆ. ಜ್ಞಾನವನ್ನು
ಹ0ಚಿಕೊಳ್ಳುವುದರ ಜೊತೆಗೆ ನಿಸ್ವಾರ್ಥ ಸೇವೆಯಲ್ಲಿ
ತೊಡಗಿಸಿಕೊ0ಡರೆ ಮು0ದೊ0ದು ದಿನ ತಾನು ಬಯಸದೇ
ಇರುವ0ಥಹ ಭಾಗ್ಯ ದೊರೆಯುತ್ತದೆ. ದೇಶಕ್ಕೆ ಸೇವೆ
ಸಲ್ಲಿಸುವುದರಿ0ದ ಸಮಾಜ ನಿಮ್ಮನ್ನು ಸದಾ ಸ್ಮರಿಸುತ್ತದೆ.
ಸೇವೆಯೇ ಪರಮಧರ್ಮವಾಗಲಿ. ಬದುಕು ನಿ0ತ
ನೀರಾಗದೇ ಜ0ಗಮವಾಗಲಿ ಎ0ದು ವಿದ್ಯಾರ್ಥಿಗಳಿಗೆ
ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶಾಲಾ
ಶಿಕ್ಷಣ ಇಲಾಖೆಯ(ಪದವಿಪೂರ್ವ) ಆಡಳಿತ
ಉಪನಿರ್ದೇಶಕರಾದ ರಾಜು ಮಾತನಾಡುತ್ತಾ, ರಾಷ್ಟ್ರೀಯ
ಸೇವಾ ಯೋಜನಾ ಗೀತೆಯ ಅರ್ಥಪೂರ್ಣ ಸಾಲುಗಳನ್ನು
ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ
ಸಾರ್ಥಕತೆಯನ್ನು ಕ0ಡುಕೊಳ್ಳಬಹುದು.
ಅಸಾಧ್ಯವನ್ನು ಸಾಧ್ಯವಾಗಿಸುವ ಸಾಧನ ನಿಮ್ಮೆಲ್ಲರಲ್ಲೂ
ಇದೆ. ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಸಕ್ರಿಯವಾಗಿ
ಭಾಗವಹಿಸಿ ಅರ್ಥಪೂರ್ಣ ಬದುಕನ್ನು ಕ0ಡುಕೊಳ್ಳಿ ಎ0ದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಇನ್ನೋರ್ವ ಅತಿಥಿಗಳಾದ,
ಶಾಲಾ ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕರು
(ಮಾನ್ಯತೆ ಮತ್ತು ಅನುದಾನ) ಮಹಮ್ಮದ್ ಜಿಯಾಉಲ್ಲಾಖಾನ್
ಮಾತನಾಡುತ್ತಾ, ರಾಷ್ಟ್ರೀಯ ಸೇವಾ ಯೋಜನೆಯನ್ನು
ಸೇರಿ ಉತ್ತಮ ನಿರ್ಧಾರ ತೆಗೆದುಕೊ0ಡಿದ್ದೀರಿ. ಶ್ರಮದಾನ
ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಇನ್ನಿತರ
ಚಟುವಟಿಕೆಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊ0ಡಾಗ
ಹೊಸ ಸಾಧ್ಯತೆಗಳನ್ನು ಕಾರ್ಯ ರೂಪಕ್ಕೆ ಇಳಿಸುವ
ಕ್ಷಮತೆ ನಿಮ್ಮಲ್ಲಿ ಹೆಚ್ಚುತ್ತದೆ. ನಿಮ್ಮಲ್ಲಿ ಅಡಕವಾಗಿರುವ
ಸೃಜನಶೀಲತೆಯನ್ನು, ಪ್ರತಿಭೆಯನ್ನು
ಕ0ಡುಕೊಳ್ಳುತ್ತೀರಿ ಎ0ದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಇನ್ನೋರ್ವ ಅತಿಥಿಗಳಾದ
ಶಾಲಾ ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕರು
(ಶೈಕ್ಷಣಿಕ) ಆನ0ದ ಪಿ ಮಾತನಾಡುತ್ತಾ, ವಿಜ್ಞಾನ
ವಿದ್ಯಾರ್ಥಿಯಾಗಿದ್ದರೂ ರಾಷ್ಟ್ರೀಯ ಸೇವಾ ಯೋಜನೆ ನನ್ನ
ಜೀವನದಲ್ಲಿ ಮಹತ್ತರ ಪ್ರಭಾವವನ್ನು ಬೀರಿ ನನ್ನನ್ನು ಈ
ಮಟ್ಟಕ್ಕೆ ತ0ದು ನಿಲ್ಲಿಸಿದೆ. ರಾಷ್ಟ್ರೀಯ ಸೇವಾ ಯೋಜನೆಯ
ಮೂಲಕ ಪ್ರಭಾವಿ ನಾಯಕರಾಗಿ ಮೂಡಿ ಬನ್ನಿ ಎ0ದು
ಹೇಳಿದರು.
ರಾಷ್ಟ್ರೀಯ ಸೇವಾ ಯೋಜನೆಯ ಮ0ಗಳೂರು
ವಿಭಾಗದ ಅಧಿಕಾರಿಗಳಾದ ಸವಿತಾ ಎರ್ಮಾಳ್ ಮಾತನಾಡುತ್ತಾ
ವಿದ್ಯೆ ಇದ್ದರಷ್ಟೇ ಸಾಲದು. ಅದು ಸರಿಯಾದ ಸಮಯದಲ್ಲಿ
ಉಪಯೋಗಕ್ಕೆ ಬರಬೇಕು. ಸಮಯದ ಅರಿವನ್ನು
ಮರೆತರೆ ಗುರಿ ತಲುಪಲಾಗದು. ಮಾಡುವ
ಕಾರ್ಯವನ್ನು ಇಷ್ಟಪಟ್ಟು ಮಾಡಿದರೆ ಕಷ್ಟವಿದ್ದರೂ
ಅದನ್ನು ಸಫಲಗೊಳಿಸಬಹುದು. ಈ ಘಟಕ ಮು0ದೊ0ದು
ದಿನ ಉತ್ತಮ ಘಟಕವಾಗಿ ಮೂಡಿ ಬರಲಿ ಎ0ದು ಹಾರೈಸಿದರು.
ಎಕ್ಸಲೆ0ಟ್ ಸಮೂಹ ಶಿಕ್ಷಣ ಸ0ಸ್ಥೆಗಳ ಕಾರ್ಯದರ್ಶಿ ರಶ್ಮಿತಾ
ಜೈನ್ ಆಗಮಿಸಿದ ಅತಿಥಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರು ಸಿ ಡಿ ಜಯಣ್ಣ, ಪದವಿಪೂರ್ವ ಶಿಕ್ಷಣ ಇಲಾಖೆಯ ಅಧೀಕ್ಷಕರಾದ ಗೋಪಾಲಕೃಷ್ಣ, ಸ0ಸ್ಥೆಯ ಆಡಳಿತ ನಿರ್ದೇಶಕರಾದ ಡಾ.ಸ0ಪತ್ ಕುಮಾರ್ ಈ ಸ0ದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರಾ0ಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಸ0ಸ್ಥೆಯ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ತೇಜಸ್ವೀಭಟ್ ವ0ದಿಸಿದರು. ಉಪನ್ಯಾಸಕ ಡಾ ವಾದಿರಾಜ ಕಲ್ಲೂರಾಂiÀi
ನಿರೂಪಿಸಿದರು.