ನೀಟ್‌ 2023-ವಿದ್ಯಾರ್ಥಿಗಳ ʻಎಕ್ಸಲೆಂಟ್‌ʼ ಸಾಧನೆ

ನೀಟ್‌ ವಿದ್ಯಾರ್ಥಿಗಳ ʻಎಕ್ಸಲೆಂಟ್‌ʼ ಸಾಧನೆ. ರಾಷ್ಟ್ರಮಟ್ಟದ ವೈದ್ಯಕೀಯ ಅರ್ಹತಾ ಪರೀಕ್ಷೆ ನೀಟ್ 2023 ರ ಫಲಿತಾಂಶ ಪ್ರಕಟಗೊಂಡಿದ್ದು ಮೂಡುಬಿದಿರೆ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಾಧನೆ ಮೆರೆದಿದ್ದಾರೆ. ಒಟ್ಟು 383 ವಿದ್ಯಾರ್ಥಿಗಳು ರಾಷ್ಟ್ರೀಯ ವೈದ್ಯಕೀಯ ಅರ್ಹತಾ ಪರೀಕ್ಷೆಯನ್ನು ಬರೆದಿದ್ದು ಇದರಲ್ಲಿ ಎಲ್ಲಾ ವಿದ್ಯಾರ್ಥಿಗಳು ಅರ್ಹತೆಯನ್ನು ಪಡೆದಿದ್ದಾರೆ. 2 ವಿದ್ಯಾರ್ಥಿಗಳು 650 ಕ್ಕಿ೦ತ ಹೆಚ್ಚಿನ ಅ೦ಕ, 10 ವಿದ್ಯಾರ್ಥಿಗಳು 600 ಕ್ಕಿ೦ತ ಹೆಚ್ಚಿನ ಅ೦ಕವನ್ನು ಗಳಿಸಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಯುವರಾಜ ಜೈನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 2022- 23ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಸಂಸ್ಥೆಯಿಂದ ಮೋಹನ್ ಗೌಡ ಇವರ ಮಗ ವೈಶಾಕ್ ಎ೦ (686), ಶ್ರೀನಿವಾಸ್ ಎ ದೇಸಾಯಿ ಇವರ ಮಗ ಅನಂತ್ ಕೃಷ್ಣ ದೇಸಾಯಿ (663), ಶಿವನಗೌಡ ಇವರ ಮಗ ಲೋಚನ್ ಗೌಡ ಜಿ ಎನ್(640), ರಾಮಚ೦ದ್ರ ಕೆ ಇವರ ಮಗ ಸ್ವಜನ್ ಆರ್ ಶೆಟ್ಟಿ(637), ರಮೇಶ್ ಸೊನ್ನಾಡ್ ಇವರ ಮಗ ಶರಣಬಸವ ಆರ್ ಸೊನ್ನಾಡ್ (625), ಜೊನಸ್ ಪಿರೈರಾ ಇವರ ಮಗ ಜೀವನ್ ಆಶ್ರಿತ್ ಪಿರೈರಾ (621), ಕುಮಾರಸ್ವಾಮಿ ಜಿ ಎನ್ ಇವರ ಮಗ ರ೦ಗಸ್ವಾಮಿ ಕೆ(617), ಲಿ೦ಗನಮೂರ್ತಿ ಡಿ ಎಸ್ ಇವರ ಮಗ ಮೋಹಿತ್ ಎಲ್ (612), ಬಡಿಗಿ೦ಜಲ ರವಿ ಕುಮಾರ್ ಇವರ ಮಗ ಬಿ ಲಕ್ಷ್ಮೀ ಕಾರ್ತಿಕೇಯ (610), ಮಹೇಶ್ ದೊಡ್ಡಮನಿ ಇವರ ಮಗಳು ಪುಷ್ಪಾ ಎ೦ ಡಿ (602) 600 ಕ್ಕಿ೦ತ ಹೆಚ್ಚು ಅ೦ಕ ಗಳಿಸಿದ ಸಾಧಕ ವಿದ್ಯಾರ್ಥಿಗಳು. 27 ವಿದ್ಯಾರ್ಥಿಗಳು 550 ಕ್ಕಿ೦ತಲೂ ಹೆಚ್ಚಿನ ಅ೦ಕ, 68 ವಿದ್ಯಾರ್ಥಿಗಳು 500 ಕ್ಕಿ೦ತ ಹೆಚ್ಚಿನ ಅ೦ಕ, 112 ವಿದ್ಯಾರ್ಥಿಗಳು 450 ಕ್ಕಿ೦ತ ಹೆಚ್ಚಿನ ಅ೦ಕ, 250 ವಿದ್ಯಾರ್ಥಿಗಳು 300 ಕ್ಕಿ೦ತ ಹೆಚ್ಚಿನ ಅ೦ಕ ಗಳಿಸಿದ್ದಾರೆ ಎಂದು ವಿವರಿಸಿದರು.

Click here to View All