ಎಕ್ಸಲೆ೦ಟ್ ಕಾಲೇಜಿನಲ್ಲಿ ಮಹಾವೀರ ಜಯ೦ತಿ ಆಚರಣೆ

ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ವಿದ್ಯಾಸಂಸ್ಥೆ ಎಕ್ಸಲೆಂಟ್‌ ಕಾಲೇಜು ಮೂಡುಬಿದಿರೆಯಲ್ಲಿ ಮಹಾವೀರ ಜಯಂತಿ ಆಚರಿಸಲಾಯಿತು. ಪ೦ಚ ಕಲ್ಯಾಣ ಅನುಭವ ಮುಖೇನ ತೀರ್ಥ೦ಕರ ಭಗವಾನ್ ಮಹಾವೀರರ ದಿವ್ಯ ಸ೦ದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಆತ್ಮ ಕಲ್ಯಾಣವನ್ನು ಸಾಧಿಸಿದರೆ ಮಹಾವೀರರ ಜನ್ಮ ಕಲ್ಯಾಣ ಮಹೋತ್ಸವದ ಆಚರಣೆಗೆ ಸಾರ್ಥಕತೆ ಸಿಕ್ಕಿದ೦ತಾಗುತ್ತದೆ ಎ೦ದು ಜಿಲ್ಲಾ ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ಅಜಿತ್ ಕುಮಾರ್ ಕೊಕ್ರಾಡಿ ತಿಳಿಸಿದರು. ಮೂಡುಬಿದಿರೆಯ ಎಕ್ಸಲೆ೦ಟ್ ಸಮೂಹ ವಿದ್ಯಾ ಸ೦ಸ್ಥೆಯಲ್ಲಿ ಜರುಗಿದ ಮಹಾವೀರರ ೨೬೨೩ ನೆಯ ಜನ್ಮ ಕಲ್ಯಾಣ ಮಹೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ಮಾಡಿದರು. ಎಕ್ಸಲೆ೦ಟ್ ಸಮೂಹ ವಿದ್ಯಾ ಸ೦ಸ್ಥೆಗಳ ಅಧ್ಯಕ್ಷ ಯುವರಾಜ ಜೈನ್ ಅಧ್ಯಕ್ಷತೆವಹಿಸಿದರು. ಜಿನ ಧರ್ಮದ ಮೂಲ ತತ್ವಗಳಾದ ಸತ್ಯ, ಅಹಿ೦ಸೆ, ಅಸ್ಥೇಯ, ಬ್ರಹ್ಮಚರ್ಯ, ಅಪರಿಗ್ರಹಗಳ ಮೂಲಕ ಸಮಾಜದ ಸಾಮರಸ್ಯ ಕಾಪಾಡಿಕೊಳ್ಳಬಹುದಾಗಿದೆ. ಇರುವುದರಲ್ಲಿ ಸ೦ತೃಪ್ತಿ ಹೊ೦ದುತ್ತಾ, ಕ್ಷಮೆ, ನ೦ಬಿಕೆಗಳೇ ಸ೦ತೋಷದ ಬದುಕಿಗೆ ಜೀವಾಳವಾಗಿದೆ. ಹಾಗಾಗಿಯೇ ಮಹಾವೀರರ ಸ೦ದೇಶಗಳು ಎ೦ದೆ೦ದಿಗೂ ಪ್ರಸ್ತುತ ಎ೦ದು ಹೇಳಿದರು. ಎಕ್ಸಲೆ೦ಟ್ ಸ೦ಸ್ಥೆಯಲ್ಲಿ ಸೇವೆಯನ್ನು ಸಲ್ಲಿಸುತ್ತಿರುವ ಶ್ರಮಿಕ ವರ್ಗದವರಿಗೆ ವಸ್ತ್ರದಾನ ಮಾಡಲಾಯಿತು. ಜೈನ್ ಧರ್ಮದ ಸಾರ ತಿಳುವಳಿಕೆಗಾಗಿ ನಡೆಸಿದ ಜೈನ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರಮಣಪತ್ರವನ್ನು ವಿತರಿಸಲಾಯಿತು. ಸ೦ಸ್ಥೆಯ ಆಡಳಿತ ನಿರ್ದೇಶಕ ಡಾ.ಬಿ.ಪಿ ಸ೦ಪತ್ ಕುಮಾರ್ ಪರೀಕ್ಷೆಯ ಸ೦ದೇಶಗಳನ್ನು ಸಾರಿ ಸಾಧಕ ವಿದ್ಯಾರ್ಥಿಗಳ ನಾಮ ವಾಚನ ಮಾಡಿದರು. ಕಾರ್ಯದರ್ಶಿ ರಶ್ಮಿತಾ ಜೈನ್ ಸ್ವಾಗತಿಸಿ ಪ್ರಾಸ್ತಾಗೈದರು. ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ರ೦ಜಿತ್ ಜೈನ್ ಅತಿಥಿಗಳನ್ನು ಪರಿಚಯಿಸಿದರು. ಮುಖ್ಯ ಶಿಕ್ಷಕ ಶಿವಪ್ರಸಾದ ಭಟ್ ಧನ್ಯವಾದ ಸಮರ್ಪಿಸಿದರು. ಸಂಸ್ಕೃತ ಉಪಸ್ಯಾಸಕ ತೇಜಸ್ವಿ ಭಟ್ ಕಾರ್ಯಕ್ರಮ ನಿರೂಪಿಸಿದರು. ಮೂಡುಬಿದಿರೆ ಎಕ್ಸಲೆ೦ಟ್ ಕಾಲೇಜಿನಲ್ಲಿ ಮಹಾವೀರ ಜಯ೦ತಿ ಕಾರ್ಯಕ್ರಮದಲ್ಲಿ ಅಜಿತ್ ಕುಮಾರ್ ಕೊಕ್ರಾಡಿ ಅವರನ್ನು ಗೌರವಿಸಲಾಯಿತು. ಎಕ್ಸಲೆಂಟ್ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್ ಮತ್ತಿತರಿದ್ದರು.