JEE-Advanced-2023 ಫಲಿತಾಂಶದಲ್ಲಿ ಮೂಡುಬಿದಿರೆ ಎಕ್ಸಲೆಂಟ್ ವಿಜ್ಞಾನ ಹಾಗೂ ವಾಣಿಜ್ಯ ಪದವಿಪೂರ್ವ ಕಾಲೇಜಿನ ಚಿನ್ಮಯ್ ಬೋರ್ಕರ್ ಅಖಿಲ ಭಾರತ ಮಟ್ಟದಲ್ಲಿ 1398ನೇ ರ‍್ಯಾಂಕ್ ಪಡೆದಿದ್ದಾರೆ.
KCET ಯಲ್ಲೂ ಉತ್ತಮ ಸಾಧನೆ ಮಾಡಿದ ಚಿನ್ಮಯ್ ಇಂಜಿನಿಯರಿಂಗ್‌ನಲ್ಲಿ ರಾಜ್ಯಮಟ್ಟದಲ್ಲಿ 92ನೇ ರ‍್ಯಾಂಕ್ ಪಡೆದಿದ್ದಾರೆ. ಈತ ಮೂಡುಬಿದಿರೆ ಅಲಂಗಾರಿನ ರಾಧಕೃಷ್ಣ ಬೋರ್ಕರ್-ಉಷಾ ಆರ್ ಬೋರ್ಕರ್ ದಂಪತಿಯ ಪುತ್ರ.
ಸಾಧಕ ವಿದ್ಯಾರ್ಥಿಯನ್ನು ಎಕ್ಸಲೆಂಟ್ ಮೂಡುಬಿದಿರೆ ವಿದ್ಯಾಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ ಹಾಗೂ ಉಪನ್ಯಾಸಕ ವೃಂದಾದವರು ಅಭಿನಂದಿಸಿದ್ದಾರೆ.