ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಕರ್ನಾಟಕ ಜೈನ್ ಮಿಲನ್ ನೀಡುವ ರಾಜ್ಯಮಟ್ಟದ " ಮಿಲನಶ್ರೀ " ಪ್ರಶಸ್ತಿಯನ್ನು ಎಕ್ಸಲ್ಲೆಂಟ್ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಯುವರಾಜ್ ಜೈನ್ ಅವರಿಗೆ ಕಾಲೇಜಿನಲ್ಲಿ ನಡೆದ 19 ನೇ ವಲಯ ಸಮ್ಮೇಳನದಲ್ಲಿ ಡಾ . ಡಿ ವೀರೇಂದ್ರ ಹೆಗ್ಗಡೆಯವರು ಪ್ರದಾನ ಮಾಡಿದರು.
ಸಮಾರಂಭದಲ್ಲಿ ಮೂಡುಬಿದರೆ ಜೈನ ಮಠದ ಸ್ವಾಮೀಜಿಗಳು , ಕಾರ್ಕಳ ಜೈನ ಮಠದ ಸ್ವಾಮೀಜಿಗಳು , ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಅಧ್ಯಕ್ಷರಾದ ಧರ್ಮಸ್ಥಳ ಸುರೇಂದ್ರ ಕುಮಾರ್, ಶ್ರೀಮತಿ ಅನಿತಾ ಸುರೇಂದ್ರ ಕುಮಾರ್, ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಹಾಗು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ವಿ. ಸುನಿಲ್ ಕುಮಾರ್ ಕಾರ್ಕಳ, ರಾಜ್ಯ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ರಾಜೇಂದ್ರಕುಮಾರ್ ಹಾಗು ಜೈನ್ ಮಿಲನ್ ನ ರಾಜ್ಯ ಹಾಗೂ ವಲಯ ಪದಾಧಿಕಾರಿಗಳು ಹಾಗು ಎರಡು ರಾಜ್ಯದೆಲ್ಲೆಡೆಯ ಸಾವಿರಕ್ಕೂ ಮಿಕ್ಕಿದ ಜೈನ್ ಬಾಂಧವರು , ಊರಿನ ಗಣ್ಯರು ಭಾಗವಹಿಸಿದರು.
ಊಟ, ವಸತಿ ಹಾಗು ಎಲ್ಲ ರೀತಿಯ ವ್ಯವಸ್ಥೆಯನ್ನು ಮಾಡಿದ ಸಂಸ್ಥೆಯ ಅಧ್ಯಕ್ಷರು , ಕಾರ್ಯದರ್ಶಿ ಯವರು ಹಾಗು ಎಲ್ಲ ಸಿಬ್ಬಂದಿಗಳನ್ನು ಜೈನ್ ಮಿಲನ್ ಅಧ್ಯಕ್ಷರು ಅಭಿನಂದಿಸಿದರು.
ಉಪನ್ಯಾಸ , ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.