ರಾಷ್ಟ್ರಮಟ್ಟದ ಪ್ರತಿಷ್ಠಿತ ಯುವ ವಿಜ್ಞಾನಿ ಕಾರ್ಯಕ್ರಮದಲ್ಲಿ ಮೂಡಬಿದ್ರೆಯ ಪ್ರತಿಭೆ ಮೌಲ್ಯ ವೈ ಆರ್ ಜೈನ್

ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ ಇಸ್ರೋಇವರು ಶಾಲಾ ಮಕ್ಕಳಿಗಾಗಿ ಪ್ರತಿ ವರ್ಷವೂ ಆಯೋಜಿಸುವ ರಾಷ್ಟ್ರಮಟ್ಟದ ಯುವ ವಿಜ್ಞಾನಿ ಕಾರ್ಯಕ್ರಮ `ಯುವಿಕಗೆ ಈ ಬಾರಿ ಎಕ್ಸಲೆಂಟ್ ಮೂಡುಬಿದಿರೆಯ ಪ್ರತಿಭೆ ಮೌಲ್ಯ ವೈ ಆರ್ ಜೈನ್ ಆಯ್ಕೆಗೊಂಡು ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ರಾಷ್ಟ್ರಮಟ್ಟದಲ್ಲಿ ವಿಶೇಷ ಸಾಧನೆಯನ್ನು ಗೈದಿದ್ದಾರೆ. ಇಸ್ರೋನ ವಿವಿಧ ಕೇಂದ್ರಗಳಲ್ಲಿ ಎರಡು ವಾರಗಳ ಕಾಲ ಜರಗುವ ಯುವಿಕ-2024ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಈ ಬಾರಿ ದೇಶದ ಎಲ್ಲಾ ರಾಜ್ಯಗಳಿಂದ ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ 85000ಕ್ಕೂ ವಿದ್ಯಾರ್ಥಿಗಳು ಆಕಾಂಕ್ಷಿಗಳಾಗಿ ಅರ್ಜಿಯನ್ನು ಸಲ್ಲಿಸಿದ್ದರು. ವಿದ್ಯಾರ್ಥಿಗಳ ಮೂರು ವರುಷಗಳ ಶೈಕ್ಷಣಿಕ ಸಾಧನೆ, ರಾಜ್ಯ ರಾಷ್ಟ್ರಮಟ್ಟದ ವೈಜ್ಞಾನಿಕ, ಕ್ರೀಡಾ ಸಾಧನೆಗಳು, ಒಲಂಪಿಯಾಡ್ ತತ್ಸಮಾನ ಸ್ಪರ್ಧೆಗಳಲ್ಲಿ ಪಡೆದ ರ್‍ಯಾಂಕ್ ಜೊತೆಗೆ ಮುಖ್ಯವಾಗಿ ಇಸ್ರೋ ಆಯೋಜಿಸುವ ಆನ್‌ಲೈನ್ ರಸಪ್ರಸ್ನೆಯಲ್ಲಿ ವಿದ್ಯಾರ್ಥಿಯ ಫಲಿತಾಂಶ ಇವೆಲ್ಲವನ್ನು ಮಾನದಂಡವನ್ನಾಗಿರಿಸಿ 250 ಮಂದಿ ವಿದ್ಯಾರ್ಥಿಗಳನ್ನು ಪ್ರಸಕ್ತ ಸಾಲಿನ `ಯುವಿಕಕ್ಕೆ ಆಯ್ಕೆ ಮಾಡಲಾಗಿದ್ದು, ಕರ್ನಾಟಕದಿಂದ ಆಯ್ಕೆಯಾದ 12 ಮಂದಿಗಳಲ್ಲಿ ರಾಜ್ಯ ಪಠ್ಯಕ್ರಮ ಭೋಧಿಸುವ ಶಿಕ್ಷಣ ಸಂಸ್ಥೆಯಿಂದ ಆಯ್ಕೆಯಾಗಿ ಭಾಗವಹಿಸಿದ ಕರ್ನಾಟಕದ ಏಕೈಕ ವಿದ್ಯಾರ್ಥಿನಿ ಮೂಡುಬಿದಿರೆಯ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯ ಮೌಲ್ಯ ವೈ ಆರ್ ಜೈನ್ ಆಗಿರುವುದು ಶಿಕ್ಷಣ ಕಾಶಿ ಎನಿಸಿದ ಮೂಡುಬಿದಿರೆಗೆ ವಿಶೇಷ ಮೆರಗನ್ನು ತಂದಿದೆ. ಈಗಾಗಲೇ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಾಕಷ್ಟು ಸಾಧನೆಗಳನ್ನು ಮಾಡಿ, ಸಹ್ಯಾದ್ರಿ ಸೈನ್ಸ್‌ಟ್ಯಾಲೆಂಟ್ ಹಂಟ್ ಕಾರ್ಯಕ್ರಮದಲ್ಲಿ ವಿಜ್ಞಾನ ಮಾದರಿ ತಯಾರಿ, ಜಿಲ್ಲಾರಾಜ್ಯ ಮಟ್ಟದಆನ್ ಲೈನ್-ಆಫ್‌ಲೈನ್ ಸ್ಪರ್ಧೆಗಳಲ್ಲಿ ಭಾಗವಹಿಸುವಿಕೆ ಜೊತೆಗೆ ರಾಷ್ಟ್ರ, ರಾಜ್ಯಮಟ್ಟದ ಅಟಲ್ ಮಾರಥಾನ್, ಇನ್‌ಸ್ಪಾಯರ್ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿನೂತನವಾದ ಸಂಶೋಧನಾತ್ಮಕ ಮಾದರಿಗಳನ್ನು ಪ್ರಸ್ತುತ ಪಡಿಸುವ ಮೂಲಕ ಗಮನ ಸೆಳೆದಿರುವ ಈ ಪ್ರತಿಭೆ ಮೂಡುಬಿದಿರೆಯ ಪ್ರತಿಷ್ಠಿತ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಯುವರಾಜ್‌ಜೈನ್ ಹಾಗೂ ಕಾರ್ಯದರ್ಶಿಗಳಾದ ಶ್ರೀಮತಿ ರಶ್ಮಿತಾ ಜೈನ್ ಇವರ ಸುಪುತ್ರಿಯಾಗಿದ್ದಾಳೆ.