ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ನಡೆದ ಶಿಕ್ಷಣ ಮತ್ತು ನೈತಿಕ ಮೌಲ್ಯ ಎಂಬ ವಿಷಯದಡಿಯಲ್ಲಿ ಉಪನ್ಯಾಸ ಮತ್ತು ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಸುವರ್ಣ ನ್ಯೂಸ್ 24×7 ನ ಪ್ರಧಾನ ಸಂಪಾದಕರಾದ ಶ್ರೀ ಅಜಿತ್ ಹನುಮಕ್ಕನವರ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಉಪನ್ಯಾಸ ನೀಡುತ್ತಾ ವೃತ್ತಿ ಮತ್ತು ಪ್ರವೃತಿ ಒಂದೇ ಆದಾಗ ಜೀವನ ಸುಖವಾಗಿರುತ್ತದೆ ಎಂದು ಹೇಳುತ್ತಾ ಅನ್ನಕ್ಕಾಗಿ ಆತ್ಮ ಸಂತೋಷಕ್ಕಾಗಿ ಕೆಲಸ ಮಾಡಬೇಕು ಇವೆರಡನ್ನು ಒಂದರಲ್ಲೇ ಗಳಿಸಿಕೊಳ್ಳಬೇಕು ಎಂದರು.ಹಾಗೆಯೇ ಶಿಕ್ಷಣ ಮತ್ತು ನೈತಿಕ ಮೌಲ್ಯದ ಕುರಿತು ಮಾತನಾಡಿದ ಇವರು ಸಾವಿರಾರು ಬದಲಾವಣೆಗೆ ಸಾಕ್ಷಿಯಾಗುತ್ತಿರುವ ತಲೆಮಾರು ಇಂದಿನ ತಲೆಮಾರು ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ಪರ್ಧಾ ಮನೋಭಾವದಿಂದ ನೈತಿಕತೆ ಮಾಯವಾಗಬಾರದು.ನಮ್ಮ ಗುರಿಯನ್ನು ನೈತಿಕತೆ ಮುನ್ನಡೆಸಬೇಕು ಎನ್ನುತ್ತಾ ತಪ್ಪು ಮಾಡುವಾಗ ಕಲಿಸಿದ ಗುರು ನೆನಪಾಗಬೇಕು,ಆಗ ತಪ್ಪುಗಳಾಗುವುದಿಲ್ಲ ಎಂದರು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯಲ್ಲಿ ಅವಿರತ ಸೇವೆ ಸಲ್ಲಿಸಿದ ಬೋಧಕೇತರ ಸಿಬ್ಬಂದಿಗಳನ್ನು ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ರಶ್ಮಿತಾ ಜೈನ್ ಮುಖ್ಯೋಪಾಧ್ಯಾಯರಾದ ಶಿವ ಪ್ರಸಾದ್ ಭಟ್ ಉಪಸ್ಥಿತರಿದ್ದರು. ಪ್ರಾಂಶುಪಾಲರಾದ ಪ್ರದೀಪ್ ಶೆಟ್ಟಿ ಸ್ವಾಗತಿಸಿದರು.ಉಪನ್ಯಾಸಕಿ ಯಶಸ್ವಿನಿ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.