ಸ್ಥಳೀಯ ಕಲ್ಲಬೆಟ್ಟಿನ ಎಕ್ಸಲೆಂಟ್ ವಿದ್ಯಾ ಸಂಸ್ಥೆಯ ವತಿಯಿಂದ ಮೂಡುಬಿದಿರೆ ಪರಿಸರವನ್ನು ಸ್ವಚ್ಛವಾಗಿ ಇಡಲು ನಾಗರಿಕ ಜಾಗೃತಿ ಕಾರ್ಯಕ್ರಮ ಡಿಸೆಂಬರ್ 21ರಂದು ನಡೆಯಿತು. ಮೂಡುಬಿದಿರೆ ಜ್ಯೋತಿನಗರದ ಪೊಲೀಸು ಠಾಣೆ ಪ್ರದೇಶದಿಂದ ಪ್ರಾರಂಭಗೊಂಡ ನಾಗರಿಕ ಜಾಗೃತಿ ಜಾಥಾ ಕಾರ್ಯಕ್ರಮ ಕಲ್ಲಬೆಟ್ಟಿನ ಉರ್ಪೆಲ್ ಪಾದೆ ತನಕ ರಾಜ್ಯ ರಸ್ತೆ ಸಾರಿಗೆ ಗುಂಟ ನಡೆಯಿತು. ವಿವಿಧ ಜಾಗೃತಿ ಫಲಕಗಳನ್ನು ಹಿಡಿದ ವಿದ್ಯಾರ್ಥಿಗಳು ನೇತಾರರೊಂದಿಗೆ ಘೋಷಣೆಗಳನ್ನು ಮೊಳಗಿಸುತ್ತ ಕಾಲ್ನಾಡಿಗೆಯಲ್ಲಿ ನಡೆದರು. ಜಾಗೃತಿ ಜಾಥಾವನ್ನು ಉದ್ಘಾಟಿಸಿ ಮಾತನಾಡಿದ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್, ವಿದ್ಯಾರ್ಥಿಗಳ ಮೂಲಕ ನಾಗರಿಕರನ್ನು ಸ್ವಚ್ಛತೆಯ ಕಡೆಗೆ ಹಾಗೂ ಏಕೆ ಬಳಕೆ ಪ್ಲಾಸ್ಟಿಕ್ ನಿಲ್ಲಿಸುವ ಬಗೆಗೆ ಜಾಗೃತಿ ಮೂಡಿಸಲು ಒಂದು ಚಿಕ್ಕ ಪ್ರಯತ್ನ ನಡೆಯುತ್ತಿದೆ. ಅದಕ್ಕೆ ಎಲ್ಲರೂ ಸಹಕರಿಸಿ ಮೂಡುಬಿದಿರೆಯನ್ನು ಸ್ವಚ್ಛ, ಪ್ಲಾಸ್ಟಿಕ್ ಮುಕ್ತ ಮಾಡಲು ಕೈಜೋಡಿಸಬೇಕೆಂದು ಕೇಳಿಕೊಂಡರು. ಇದೇ ಸಂದರ್ಭದಲ್ಲಿ ಮಾತನಾಡಿದ ಪುರಸಭಾ ಉಪಾಧ್ಯಕ್ಷ ನಾಗರಾಜ ಪೂಜಾರಿ, ಎ ಎಸ್ ಐ ರಾಜೇಶ್, ಪ್ರಶಾಂತ್, ಕಾರ್ಯದರ್ಶಿ ರಶ್ಮಿತಾ ಜೈನ್ ಅವರುಗಳು, ಕನಿಷ್ಠ ಮಕ್ಕಳಿಂದಲಾದರೂ ಈ ಪ್ರಯತ್ನ ಯಶಸ್ವಿಗೊಂಡು ಸ್ವಚ್ಛ ಮೂಡುಬಿದಿರೆಯ ಕನಸು ಸಾಕಾರಗೊಳ್ಳಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಸಿ ಎಚ್ ಗಫೂರ್, ಕೃಷ್ಣರಾಜ ಹೆಗ್ಡೆ ಹಾಗೂ ಇತರ ಮುಖಂಡರು ಹಾಜರಿದ್ದರು. ಎಕ್ಸಲೆಂಟ್ ಸಂಸ್ಥೆಯ ಸಂಪತ್ ಕುಮಾರ್ ಸ್ವಾಗತಿಸಿ, ವಂದಿಸಿದರು.
An initiative by the Excellent Education Foundation to raise awareness on keeping Namma Moodubidire clean, plastic-free, and promoting road safety